Select Your Language

Notifications

webdunia
webdunia
webdunia
webdunia

ಟಾನ್ಸಿಲ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ

ಟಾನ್ಸಿಲ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ
ಬೆಂಗಳೂರು , ಶನಿವಾರ, 14 ಅಕ್ಟೋಬರ್ 2017 (08:14 IST)
ಬೆಂಗಳೂರು: ಶೀತ ಪ್ರಕೃತಿಯವರಿಗೆ ಟಾನ್ಸಿಲ್ ಸಮಸ್ಯೆ ಹೆಚ್ಚು. ಟಾನ್ಸಿಲ್ ನೋವಿದ್ದರೆ ಉಗುಳು ನುಂಗಲೂ ಆಗದ ಪರಿಸ್ಥಿತಿ. ಈ ನೋವಿನಿಂದ ಹೊರಬರಲು ಕೆಲವು ಮನೆ ಮದ್ದುಗಳಿವೆ. ಅವು ಯಾವುವು ನೋಡೋಣ.

 
ಉಪ್ಪು ನೀರು
ಇದು ಸಾಮಾನ್ಯ ಗಂಟಲು ನೋವಿಗೂ ವೈದ್ಯರು ಹೇಳುವ ಪರಿಹಾರ. ಹದ ಬಿಸಿ ನೀರಿಗೆ ಉಪ್ಪು ಹಾಕಿಕೊಂಡು ಆ ನೀರಿನಲ್ಲಿ ಗಾರ್ಗಲ್ ಮಾಡಿಕೊಳ್ಳಿ.

ಜೇನು ತುಪ್ಪ ಮತ್ತು ನಿಂಬೆ
ಹದ ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿಕೊಂಡು, ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆ ರಸ ಬೆರೆಸಿ ಆಗಾಗ ಕುಡಿಯುತ್ತಿರಿ.

ಚಕ್ಕೆ
ಚಕ್ಕೆ ನಮ್ಮ ಟಾನ್ಸಿಲ್ ನ ಬ್ಯಾಕ್ಟೀರಿಯಾಗಳ ಬೆಳವಣಿಗೆ ಕುಂಠಿತಗೊಳಿಸುವುದಲ್ಲದೆ, ನೋವು ಹೆಚ್ಚಾಗದಂತೆ ತಡೆಯುತ್ತದೆ. ಹದ ಬಿಸಿ ನೀರಿನ ಜತೆಗೆ ಎರಡು ಸ್ಪೂನ್ ಜೇನು ತುಪ್ಪ ಮತ್ತು ಒಂದು ಟೇಬಲ್ ಸ್ಪೂನ್ ನಷ್ಟು ಚಕ್ಕೆ ಹುಡಿಯನ್ನು ಸೇರಿಸಿ ಕುಡಿಯಿರಿ.

ಹಾಲು
ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ಗಂಟಲು ನೋವಿಗೆ ಆಶ್ವಾಸನೆ ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈಗ್ರೇನ್ ತಲೆ ನೋವಿಗೆ ಈ ಮನೆ ಮದ್ದು ಮಾಡಿ