Select Your Language

Notifications

webdunia
webdunia
webdunia
webdunia

ಹೊಟ್ಟೆ ಹುಣ್ಣಿನ ಸಮಸ್ಯೆಗೆ ಮನೆ ಮದ್ದು

ಹೊಟ್ಟೆ ಹುಣ್ಣಿನ ಸಮಸ್ಯೆಗೆ ಮನೆ ಮದ್ದು
Bangalore , ಮಂಗಳವಾರ, 30 ಮೇ 2017 (09:18 IST)
ಬೆಂಗಳೂರು: ಹೊಟ್ಟೆ ಹುಣ್ಣಿನ ಆಧುನಿಕ ಆಹಾರ ಪದ್ಧತಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತಿದೆ. ಅದಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವು ಚಿಕಿತ್ಸೆಗಳಿವೆ. ಅದೇನೆಂದು ನೋಡೋಣ.

 
ಅಲ್ಯುವಿರಾ
ಅಲ್ಯುವಿರಾದ ರಸ ತೆಗೆದು ಜ್ಯೂಸ್ ಮಾಡಿ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ, ಹೊಟ್ಟೆ ಹುಣ್ಣು ಮಾಯವಾಗುವುದು.

ಜೇನು ತುಪ್ಪ
ಜೇನು ತುಪ್ಪ ಸಿಹಿಯಾಗಿರುವಷ್ಟೇ ಅದರ ಗುಣವೂ ಸಿಹಿ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶವು ಹೊಟ್ಟೆ ಹುಣ್ಣಿನಂತಹ ಸಮಸ್ಯೆಗೆ ಪರಿಹಾರ ನೀಡಬಲ್ಲದು.

ಬೆಳ್ಳುಳ್ಳಿ
ಬೆಳ್ಳುಳ್ಳಿ ಹಲವು ರೋಗಗಳಿಗೆ ಮದ್ದು. ಬೆಳ್ಳುಳ್ಳಿಯನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ರಸ ತೆಗೆದು ಬೇರೆ ರೂಪದಲ್ಲಿ ಸೇವನೆ ಮಾಡಬಹುದು.

ಕ್ಯಾಬೇಜ್
ಕ್ಯಾಬೇಜ್ ಕೂಡಾ ಹೊಟ್ಟೆ ಹುಣ್ಣಿನ ಸಮಸ್ಯೆ ಇರುವವರು ಸೇವಿಸಬೇಕಾದ ತರಕಾರಿ. ಇದು ಅಮಿನೋ ಆಸಿಡ್ ಅಂಶವನ್ನು ಬಿಡುಗಡೆ ಮಾಡುವುದರಿಂದ ಹೊಟ್ಟೆಗೆ ಸರಿಯಾಗಿ ರಕ್ತ ಪೂರೈಕೆಯಾಗುವಂತೆ ಮಾಡುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದ ಅಲರ್ಜಿಗಳಿಗೆ ಮನೆಯಲ್ಲೇ ಮಾಡಬಹುದಾದ ಮದ್ದು