Select Your Language

Notifications

webdunia
webdunia
webdunia
webdunia

ಆ ದಿನಗಳಲ್ಲಿ ಹೊಟ್ಟೆ ನೋವೆ..? ಇಲ್ಲಿದೆ ಸುಲಭ ಪರಿಹಾರ

ಆ ದಿನಗಳಲ್ಲಿ ಹೊಟ್ಟೆ ನೋವೆ..? ಇಲ್ಲಿದೆ ಸುಲಭ ಪರಿಹಾರ
ಬೆಂಗಳೂರು , ಶನಿವಾರ, 1 ಜುಲೈ 2017 (15:49 IST)
ಮಹಿಳೆಯರಿಗೆ ಪ್ರತಿ ತಿಂಗಳೂ ಕಾಡುವ ಋತುಚಕ್ರದ ಅವಧಿಯಲ್ಲಿ ಕೆಳಹೊಟ್ಟೆ ನೋವು ಬಹುತೇಕ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ. ತಾಳಲಾರದ ಹೊಟ್ಟೆ ನೋವು ಹಲವು ಮಹಿಳೆಯರನ್ನು ಹೈರಾಣಿಸುತ್ತದೆ. ಇಂತಹ ಸಂದರ್ಬದಲ್ಲಿ ಹೆಚ್ಚಿನ ಮಹಿಳೆಯರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಮಾತ್ರೆಗಳು ತಾತ್ಕಾಲಿಕವಾಗಿ ನೋವನ್ನ ನಿವಾರಿಸುತ್ತವೆಯಾದರು ದೀರ್ಘ ಕಾಲ ಮಾತ್ರೆಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪಾರಿನಾಮ ಬೀರುವ ಸಾಧ್ಯತೆಯಿರುತ್ತದೆ.
 
ಹಾಗಾಗಿ ಮಹಿಳೆಯರ ಆ ದಿನಗಳಲ್ಲಿ ಹೊಟ್ಟೆ ನೋವಿನಿಂದ ಪಾರಾಗಲು ಕೆಲವು ಸುಲಭ ಹಾಗೂ ನೈಸರ್ಗಿಕವಾದ ಮನೆಮದ್ದುಗಳನ್ನು ಬಳಸುವುದು ಹೆಚ್ಚು ಉತ್ತಮ. ಅಂತಹ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
 
* ಶುಂಠಿ ನೀರಿನ ಸೇವನೆ:
 
ಒಂದು ಇಂಚಿನಷ್ಟು ಹಸಿಶುಂಠಿಯನ್ನು ತೆಗೆದುಕೊಂಡು ಸಿಪ್ಪೆ ಬಿಡಿಸಿ. ಬಳಿಕ ಸ್ವಲ್ಪ ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿ. ಬಳಿಕ ಈ ನೀರನ್ನು ಸೋಸಿ. ಒಂದು ಕಪ್ ನಷ್ಟು ಬಿಸಿ ಬಿಸಿಯಾಗಿ ಈ ಶುಂಠಿ ನೀರನು ಕುಡಿಯಿರಿ. ದಿನಕ್ಕೆ ಎರದು ಬಾರಿ ಈ ನೀರನ್ನು ಸೇವಿಸುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ.
 
* ಜೀರಿಗೆ ನೀರು:
 
ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಜಜ್ಜಿ ಹಾಕಿ ಕುದಿಸಿ. ಬಳಿಕ ತಣ್ಣಗಾಗುವ ವರೆಗೆ ಹಾಗೇ ಬಿಡಿ.  ಬಳಿಕ ಒಂದು ಕಪ್ ನಷ್ಟು ಈ ಜೀರಿಗೆ ನೀರನ್ನು ಸೇವಿಸಿ. ಹೀಗೆ ಮಾಡುವುದರಿಂದ ಆದಿನಗಳಲ್ಲಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ.      
 
* ಕ್ಯಾರೆಟ್ ಜ್ಯೂಸ್:
ಒಂದು ಗ್ಲ್ಯಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಋತುಚಕ್ರದ ಸಮಯದ ನೋವು ನಿವಾರಣೆಯಾಗುತ್ತದೆ.  ಅಲ್ಲದೇ ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗುವಂತೆ ಮಾಡುತ್ತದೆ.
 
 * ಸಿಹಿಗುಂಬಳ ಇಲ್ಲವೇ ಚೀನಿಕಾಯಿ:
 ನೈಸರ್ಗಿಕವಾಗಿ ದೊರಕುವ ಮನೆಮದ್ದುಗಳಲ್ಲಿ ಸಿಹಿಗುಂಬಳ ಅಥವಾ ಚೀನಿಕಾಯಿ ಕೂಡ ಒಂದು. ಸಿಹಿಗುಂಬಳ ಅಥವಾ ಚೀನಿಕಾಯಿಯ ತಿರುಳನ್ನು ತೆಗೆದುಕೊಂಡು ರೂಮ್ ಟೆಂಪರೇಚರ್ ನಲ್ಲಿ ಸ್ವಲ್ಪ ಒಣಗಲು ಬಿಡಿ. ನಂತರ ಅದನ್ನು ಮಿಕ್ಸಿ ಮಾಡಿ, ಸಕ್ಕರೆ ಇಲ್ಲವೇ ಬೆಲ್ಲ ಮತ್ತು ಹಾಲು  ಅಥವಾ ಸಕ್ಕರೆ ಮತ್ತು ಮೊಸರು ಸೇರಿಸಿ ಪ್ರತಿದಿನ ಸೇವಿಸೋದರಿಂದ ಋತುಚಕ್ರದ ಸಂದರ್ಬದಲ್ಲಿ ಅತಿಯಾದ ರಕ್ತಸ್ರಾವದಿಂದ ಆಗುವ ಹೊಟ್ಟೆನೋವು, ಸುಸ್ತನ್ನು ನಿವಾರಿಸಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದಲ್ಲಿ ಎಂತಹ ಆಹಾರ ಸೇವಿಸಬಾರದು?