Select Your Language

Notifications

webdunia
webdunia
webdunia
webdunia

ಕೆಲಸದಲ್ಲಿ ಒತ್ತಡವಿದೆಯೇ? ಖುಷಿಪಡಿ!

ಕೆಲಸದಲ್ಲಿ ಒತ್ತಡವಿದೆಯೇ? ಖುಷಿಪಡಿ!
Banglore , ಸೋಮವಾರ, 26 ಡಿಸೆಂಬರ್ 2016 (10:19 IST)
ಬೆಂಗಳೂರು: ನಿಮ್ಮ ಕೆಲಸದಲ್ಲಿ ಒತ್ತಡವಿದೆಯೇ? ಬಾಸ್ ತೊಂದರೆ ಕೊಡುತ್ತಿದ್ದಾರೆಯೇ? ಖುಷಿ ಪಡಿ! ಕೆಲಸದಲ್ಲಿರುವ ಒತ್ತಡ ನಮ್ಮ ದೈನಂದಿನ ಜೀವನದಲ್ಲಿ ಬರುವ ತೊಂದರೆಗಳನ್ನು ಎದುರಿಸಲು ಮನಸ್ಸು ಗಟ್ಟಿಗೊಳಿಸುತ್ತದಂತೆ.


ಹೀಗೊಂದು ಇಂಡಿಯಾನಾ ಬ್ಯುಸಿನೆಸ್ ಸ್ಕೂಲ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯೊಂದು ಈ ವಿಷಯವನ್ನು ಬಹಿರಂಗಪಡಿಸಿದೆ. ಕೆಲಸದಲ್ಲಿ ಒತ್ತಡವಿದ್ದರೆ, ಅದನ್ನು ಪರಿಹರಿಸಲು ಹಲವು ದಾರಿಗಳನ್ನು ಕಂಡುಕೊಳ್ಳುವ ಕಲೆ ಕಲಿತುಕೊಳ್ಳುತ್ತೇವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಸುಮಾರು 10,000 ಮಂದಿಯ ಮೇಲೆ ಸಂಶೋಧಕರು ತಮ್ಮ ಪ್ರಯೋಗ ನಡೆಸಿದ್ದಾರೆ. ಅವರ ಬಳಿ ಹೇಗೆ ಕೆಲಸ ಮಾಡುತ್ತೀರಿ, ಯಾವ ವಿಷಯದ ಬಗ್ಗೆ ಹೆಚ್ಚು ಗಮನ ಕೊಡುತ್ತೀರಿ ಮುಂತಾದ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಮೂಲಕ ಅಧಿಕ ಕೆಲಸ ಒತ್ತಡವಿರುವವರು ಬೇಗ ಮೃತಪಡುವ ಸಂಭವ ಕಡಿಮೆ ಎಂದು ಕಂಡುಕೊಳ್ಳಲಾಗಿದೆ.

ಸುಲಲಿತವಾದ ಕೆಲಸವಿದ್ದರೆ, ಉದ್ಯೋಗಿಗಳ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಒತ್ತಡವಿರುವವರಿಗೆ, ತಮ್ಮ ಉದ್ಯೋಗದ ಮೇಲೆ ನಿಯಂತ್ರಣ ಇಲ್ಲದವರು ಇದರಿಂದ ಹೊರಬರಲು ನಾನಾ ದಾರಿಗಳನ್ನು ಹುಡುಕುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂಲಂಗಿ ಸೊಪ್ಪಿನ ಪಲ್ಯ ತಿಂದು ಗಟ್ಟಿಯಾಗಿ