Select Your Language

Notifications

webdunia
webdunia
webdunia
webdunia

ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು..

ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು..

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 25 ಜನವರಿ 2018 (17:02 IST)
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಇರುವ ಸಲಹೆಗಳಷ್ಟು ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವ ಸಲಹೆಗಳು ಲಭ್ಯವಿರುವುದಿಲ್ಲ. ಇದಕ್ಕಾಗಿ ಮಾರುಕಟ್ಟೆಗಳಲ್ಲಿರುವ ಹಲವು ಔಷಧಗಳು ಮತ್ತು ಪ್ರೋಟೀನ್‌ನ ಹೆಸರಿನಲ್ಲಿರುವ ಪೌಡರ್‌ಗಳನ್ನು ಸೇವಿಸಿ ಅಡ್ಡ ಪರಿಣಾಮಕ್ಕೆ ಒಳಗಾಗುವ ಬದಲು ನಿಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮವಲ್ಲವೇ..? ಕೆಲವು ಉತ್ತಮ ಮತ್ತು ಸರಳ ಸಲಹೆಗಳಿಗಾಗಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.
* ನಿಮ್ಮ ಡಯೆಟ್‌ನಲ್ಲಿ ಸೋಯಾಬೀನ್ ಅನ್ನು ಸೇರಿಸಿಕೊಳ್ಳಿ. ಇದು ಹೆಚ್ಚು ಪ್ರೋಟೀನ್ ಅನ್ನು ಹೊಂದಿದ್ದು ಸಸ್ಯಾಹಾರಿಗಳಿಗೆ ಉತ್ತಮ ಪ್ರೋಟೀನ್ ಅನ್ನು ಒದಗಿಸುತ್ತದೆ. ಹೆಚ್ಚು ಹಣ್ಣುಗಳನ್ನು ಮತ್ತು ಫ್ರೆಶ್ ಜ್ಯೂಸ್‌ಗಳನ್ನು ಸೇವಿಸಿ.
 
* ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚು ಹಾಲು, ಮೊಸರು, ಬೆಣ್ಣೆ, ತುಪ್ಪ, ಕಬ್ಬು, ಅಕ್ಕಿ ಮತ್ತು ಗೋಧಿಯನ್ನು ಬಳಸಿ. ಇವುಗಳು ನೀವು ಆರೋಗ್ಯಕರ ರೀತಿಯಲ್ಲಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ.
 
* ಪ್ರತಿದಿನ ಬೆಳಿಗ್ಗೆ 5-6 ಗಂಟೆ ನೀರಿನಲ್ಲಿ ನೆನೆಸಿಟ್ಟ 3-4 ಬಾದಾಮಿಯನ್ನು ಸೇವಿಸಿ. ಇದು ಅಧಿಕ ಪ್ರೋಟೀನ್ ಅಂಶವನ್ನು ಹೊಂದಿದ್ದು ದೇಹದ ತೂಕ ಹೆಚ್ಚಲು ಸಹಕಾರಿಯಾಗಿದೆ.
 
* ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ನೀವು ನಿಯಮಿತ ವ್ಯಾಯಾಮವನ್ನೂ ಅನುಸರಿಸಬೇಕು. ಇದು ನಿಮ್ಮ ದೇಹದ ಸ್ನಾಯುಗಳನ್ನು ಹುರಿಗೊಳಿಸುವುದರೊಂದಿಗೆ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಿ ಮತ್ತೆ ಹಸಿವಾಗುವಂತೆ ಮಾಡುತ್ತದೆ.
 
* ನಿಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದ ದಾಲ್ಚಿನಿ, ಲವಂಗ, ಬೆಳ್ಳುಳ್ಳಿ, ಶುಂಠಿ, ಏಲಕ್ಕಿ, ಕಾಳುಮೆಣಸು ಇದ್ದರೆ ಇವು ನಿಮ್ಮ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
 
* ಪ್ರತಿದಿನ ಕನಿಷ್ಟ 8 ಗಂಟೆಗಳಕಾಲ ನಿದ್ದೆ ಮಾಡಿ. ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್‌ಗಳಿಂದ ದೂರವಿರಿ ಮತ್ತು ಒಳ್ಳೆಯ ನಿದ್ದೆಗಾಗಿ ಒಂದು ಲೋಟ ಹಸುವಿನ ಹಾಲಿಗೆ ಚಿಟಿಕೆ ಅರಿಶಿಣ ಮತ್ತು ಸಕ್ಕರೆಯನ್ನು ಬೆರೆಸಿ ಕುಡಿಯಿರಿ.
 
* ಚಳಿಗಾಲದಲ್ಲಿ ಹೆಚ್ಚೆಚ್ಚು ಡ್ರೈ ಫ್ರೂಟ್ಸ್‌ ಅನ್ನು ಸೇವಿಸಿ. ಇದು ಅಧಿಕ ಪ್ರೋಟೀನ್ ಹೊಂದಿದೆ, ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಚಳಿಗಾಲದ ಸೋಮಾರಿತನವನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ.
 
* ಆಹಾರವನ್ನು ಸೇವಿಸುವಾಗ ಮಧ್ಯಮ ವೇಗದಲ್ಲಿ ಸೇವಿಸಿ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಲವಣ ಗ್ರಂಥಿಗಳನ್ನು ಪ್ರಚೋದಿಸುತ್ತದೆ.
 
* ಊಟ ಮಾಡುವಾಗ ಅಥವಾ ತಿಂಡಿ ತಿನ್ನುವಾಗ ಟಿವಿ ಅಥವಾ ಮೊಬೈಲ್ ಅನ್ನು ಬಳಸಬೇಡಿ ಮತ್ತು ಊಟಮಾಡಲು ಸ್ವಚ್ಛವಾದ ಹಾಗೂ ಗಲಾಟೆ ರಹಿತ ಪ್ರದೇಶವನ್ನು ಆಯ್ಕೆಮಾಡಿಕೊಳ್ಳಿ. ನಿಮ್ಮ ಗಮನ ಪೂರ್ತಿಯಾಗಿ ತಿನ್ನುವುದರ ಮೇಲೆ ಕೇಂದ್ರೀಕೃತವಾಗಿರಬೇಕು.
 
* ಆಹಾರವನ್ನು ಸೇವಿಸುವ ಅರ್ಧಗಂಟೆ ಮೊದಲು ಅಥವಾ ನಂತರ ಹೆಚ್ಚು ನೀರನ್ನು ಕುಡಿಯಬೇಡಿ. ಊಟ ಮಾಡುವಾಗ ಅಗತ್ಯವೆನಿಸಿದರೆ ಒಂದೊಂದು ಸಿಪ್ ನೀರನ್ನು ಮಾತ್ರ ಕುಡಿಯಿರಿ ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ನೀರನ್ನು ಕುಡಿಯಿರಿ.
 
* ಸಮ ಪ್ರಮಾಣದ ಖರ್ಜೂರ, ಬಾದಾಮಿ, ಒಣದ್ರಾಕ್ಷಿ, ಅಂಜೂರವನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಅಥವಾ ಸಕ್ಕರೆ ಮತ್ತು ಹಸುವಿನ ತುಪ್ಪವನ್ನು ಸೇರಿಸಿ ಪಾಕ ಮಾಡಿ. ಇದನ್ನು ದಿನವೂ ಎರಡು ಬಾರಿ ಊಟದ ನಂತರ ಸೇವಿಸಿ.
 
ಈ ಸಲಹೆಗಳನ್ನು ಅನುಸರಿಸಿ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೆಡ್ ವೈನ್ ಆರೋಗ್ಯಕರ ಪ್ರಯೋಜನಗಳು