Select Your Language

Notifications

webdunia
webdunia
webdunia
webdunia

ಮುಟ್ಟಿನ ದಿನಗಳಲ್ಲಿ ಹುಡುಗಿಯರು ತೆಗೆದುಕೊಳ್ಳಬೇಕಾಗುವ ಅಗತ್ಯ ಕ್ರಮಗಳು ಇಲ್ಲಿವೆ ನೋಡಿ

ಮುಟ್ಟಿನ ದಿನಗಳಲ್ಲಿ ಹುಡುಗಿಯರು ತೆಗೆದುಕೊಳ್ಳಬೇಕಾಗುವ ಅಗತ್ಯ ಕ್ರಮಗಳು ಇಲ್ಲಿವೆ ನೋಡಿ
ಬೆಂಗಳೂರು , ಗುರುವಾರ, 21 ಡಿಸೆಂಬರ್ 2017 (08:14 IST)
ಬೆಂಗಳೂರು: ಮುಟ್ಟಾಗುವುದು ಎಂದರೆ ಹಾರ್ಮೋನುಗಳ ಪ್ರಭಾವದಿಂದ ಅಂಡಾಶಯಗಳು ಕ್ರಿಯಾಶೀಲವಾಗಿ ಹೆಣ್ತನದ ಹಾರ್ಮೋನುಗಳಾದ ಈಸ್ಟ್ರೋಜನ್ ಹಾಗೂ ಪ್ರೊಜಿಸ್ಟಿರಾನ್ ಗಳಿಂದ ತಿಂಗಳಿಗೊಂದು ಅಂಡೋತ್ಪತ್ತಿಯಾಗುವುದು. ಗರ್ಭಕೋಶದ ಒಳಪದರ  ಬೆಳೆದು ಸಂತಾನೋತ್ಪತ್ತಿ ಕ್ರಿಯೆ ನಡೆಯದಿದ್ದಲ್ಲಿ ಗರ್ಭಾಶಯದ ಒಳಪದರವು ಕಳಚಲ್ಪಟ್ಟು  ಯೋನಿ ಮೂಲಕ ರಕ್ತಸ್ರಾವದ ರೂಪದಲ್ಲಿ ಹೊರಬರುತ್ತದೆ.ಇದನ್ನೇ ಮುಟ್ಟು ಅಥವಾ ಋತುಸ್ರಾವ  ಎಂದು ಕರೆಯುತ್ತೇವೆ.


ಋತುಚಕ್ರದ ಸಮಯದಲ್ಲಿ ಹೊರಬರುವುದು ಕೆಟ್ಟ ರಕ್ತವಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮುಟ್ಟು ಮೊದಲ ಸಲ ಸರಿಯಾದ ಸಮಯಕ್ಕೆ ಬರದಿದ್ದರೆ ನಂತರದ ಸಮಯದಲ್ಲಿ 22 ರಿಂದ 35 ದಿನದೊಳಗಾಗಿ ಬರುತ್ತದೆ. ಹಾಗೂ ಎರಡರಿಂದ ಏಳು ದಿನಗಳವರೆಗೆ ರಕ್ತಸ್ರಾವವಾಗುತ್ತಿರುತ್ತದೆ. ಇದಕ್ಕಿಂತ ಹೆಚ್ಚು ರಕ್ತಸ್ರಾವವಾದ್ದಲ್ಲಿ ಚಿಕಿತ್ಸೆ ಅಗತ್ಯ.


ಋತುಚಕ್ರದ ಸಮಯದಲ್ಲಿ ಗರ್ಭಾಶಯದ ಒಳಪದರವು ಕಳಚಿ ಹೊರಬರುವಾಗ ಗರ್ಭಕೋಶದ ಬಾಯಿ ತೆರೆದಿದ್ದು ಸೋಂಕು ಯೋನಿ ಮುಖಾಂತರ ಕಾಯಿಲೆ ಹರಡುವ ಸಂಭವವಿರುವುದರಿಂದ ಆ ದಿನ ದಿನಕ್ಕೆ ಎರಡು ಬಾರಿ ಸ್ನಾನಮಾಡುವುದು ಒಳ್ಳೆಯದು. ಸೂರ್ಯನ ಬಿಸಿಲಿನಲ್ಲಿ ಒಳಗಿಸಿದ ಹತ್ತಿಬಟ್ಟೆಯ ಒಳ ಉಡುಪುಗಳನ್ನು ಧರಿಸುವುದು ಉತ್ತಮ. ಶೌಚಾಲಯಕ್ಕೆ ಹೋದ ಪ್ರತಿಸಲವು ಜನನಾಂಗ ಭಾಗವನ್ನು ಸ್ವಚ್ಚ ನೀರಿನಿಂದ ತೊಳೆದು ಒಣಬಟ್ಟೆಯಿಂದ ಒರೆಸಿಕೊಳ್ಳಬೇಕು. ಬಳಸುವ ಬಟ್ಟೆ ಅಥವಾ ಪ್ಯಾಡ್ ನ್ನು ಕನಿಷ್ಠ ನಾಲ್ಕರಿಂದ ಐದುಬಾರಿ ಬದಲಾಯಿಸಬೇಕು. ಇಲ್ಲದಿದ್ದರೆ ಚರ್ಮದ ತುರಿಕೆ ಅಥವಾ ಗರ್ಭಾಕೋಶದ ಸೋಂಕು ಉಂಟಾಗಬಹುದು. ಯೋನಿ ಕೂದಲನ್ನು ಆಗಾಗ್ಗ ಕತ್ತರಿಯಿಂದ ಕತ್ತರಿಸಬೇಕು ಬದಲಾಗಿ ರಾಸಾಯನಿಕ ಕ್ರೀಂಗಳನ್ನು ಬಳಸಬಾರದು ಹಾಗು ಸೋಪಿನಿಂದ ತೊಳೆಯಬಾರದು.ಹಾಗೇ ಬಿಸಿ ನೀರನ್ನು ಬಳಸದೆ ಉಗುರುಬೆಚ್ಚನೆಯ ನೀರನ್ನು ಬಳಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾಸವಾಳ ಟೀ ಬಗ್ಗೆ ನಿಮಗೆಷ್ಟು ಗೊತ್ತು?