ಬೆಂಗಳೂರು: ಎಲ್ಲೇ ಹೋಗಬೇಕಿದ್ದರೂ, ಇಂದಿನ ಕಾಲದಲ್ಲಿ ನಾವು ವಾಹನವನ್ನು ಅವಲಂಬಿಸುತ್ತೇವೆ. ಕಡಿಮೆ ದೂರವಿದ್ದರೂ, ನಡೆದುಕೊಂಡೇ ಹೋಗುವವರ ಬಗ್ಗೆ ಒಂಥರಾ ಅಪಹಾಸ್ಯ ಮಾಡುತ್ತೇವೆ. ಆದರೆ ನಡಿಗೆಯಲ್ಲಿದೆ ಹಲವು ಆರೋಗ್ಯಕರ ಉಪಯೋಗಗಳು.
· ತೂಕ ಕಡಿಮೆ ಮಾಡಲು
· ಮಧುಮೇಹ, ರಕ್ತದೊತ್ತಡ, ಹೃದಯ ಖಾಯಿಲೆಯಿಂದ ರಕ್ಷಿಸುತ್ತದೆ.
· ಮನಸ್ಸಿಗೂ ಉಲ್ಲಾಸ ನೀಡುತ್ತದೆ.
· ಮಾಂಸ ಖಂಡಗಳಿಗೆ ಉತ್ತಮ ವ್ಯಾಯಾಮವೊದಗುತ್ತದೆ.
· ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.
· ಸ್ಮರಣ ಶಕ್ತಿ ಚುರುಕುಗೊಳಿಸುತ್ತದೆ.
· ನಡಿಗೆಯಿಂದ ವಿಟಮಿನ್ ಡಿ ಅಂಶ ಹೆಚ್ಚಾಗುವುದು. ಇದು ಎಲುಬನ್ನು ಸದೃಡಗೊಳಿಸುತ್ತದೆ.
· ಎಲ್ಲಕ್ಕಿಂತ ಹೆಚ್ಚು ಸಂತೋಷ, ಆತ್ಮ ವಿಶ್ವಾಸ ನೀಡುತ್ತದೆ.
ಇಷ್ಟು ಸಾಲದೇ, ನಡಿಗೆಯಿಂದ ಸಿಗುವ ಆರೋಗ್ಯಕರ ಉಪಯೋಗಗಳು. ಮತ್ತೇಕೆ ತಡ? ನೀವೂ ನಡೆಯಿರಿ, ನಡೆಯುವವರನ್ನು ಹೀಯಾಳಿಸುವುದನ್ನು ಬಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ