Select Your Language

Notifications

webdunia
webdunia
webdunia
webdunia

ಉಂಡೆ ಉಂಡೆ ಬೆಲ್ಲ ಯಾಕೆ ತಿನ್ನಬೇಕು ಗೊತ್ತಾ?

ಉಂಡೆ ಉಂಡೆ ಬೆಲ್ಲ ಯಾಕೆ ತಿನ್ನಬೇಕು ಗೊತ್ತಾ?
ಬೆಂಗಳೂರು , ಮಂಗಳವಾರ, 29 ಆಗಸ್ಟ್ 2017 (08:33 IST)
ಬೆಂಗಳೂರು: ಹಿಂದಿನ ಕಾಲದಲ್ಲಿ ಹಿರಿಯರು ನೀರು ಕುಡಿಯುವಾಗ ಒಂದು ಚೂರು ಬೆಲ್ಲವನ್ನೂ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಯಾಕೆಂದರೆ ಬೆಲ್ಲ ಅಷ್ಟು ಆರೋಗ್ಯಕರ. ಅದರ ಆರೋಗ್ಯಕರ ಅಂಶಗಳು ಯಾವುವು ನೋಡೋಣ.

 
ಮಲಬದ್ಧತೆಗೆ
ಬೆಲ್ಲ ನಮ್ಮ ದೇಹದ ಜೀರ್ಣಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಬೆಲ್ಲ ತಿನ್ನುವುದರಿಂದ ಮಲಬದ್ಧತೆಯನ್ನು ದೂರ ಮಾಡಬಹುದು.

ಪಿತ್ತಜನಕಾಂಗಕ್ಕೆ
ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಕ್ಲೀನ್ ಮಾಡುವ ಶಕ್ತಿ ಬೆಲ್ಲಕ್ಕಿದೆ. ಹಾಗಾಗಿ ಇದು ಪಿತ್ತಜನಕಾಂಗದ ಕಾರ್ಯಕ್ಷಮತೆ ಸುಗಮಗೊಳಿಸಲು ಒಳ್ಳೆಯದು.

ಜ್ವರ
ಕೆಮ್ಮು, ಶೀತ ಮುಂತಾದ ಜ್ವರದ ಲಕ್ಷಣಗಳಿದ್ದರೆ ಬೆಲ್ಲ ಬಾಯಿಗೆ ಹಾಕಿಕೊಳ್ಳಿ. ಬಿಸಿ ನೀರು ಅಥವಾ ಚಹಾದೊಂದಿಗೆ ಬೆಲ್ಲ ಸೇರಿಸಿ ಕುಡಿಯುವುದು ಜ್ವರದ ಲಕ್ಷಣಗಳು ನಿಲ್ಲಲು ಒಳ್ಳೆಯದು.

ರಕ್ತ ಶುದ್ಧಿಗೆ
ನಿಯಮಿತವಾಗಿ ಬೆಲ್ಲ ಸೇವಿಸುವುದರಿಂದ ನಮ್ಮ ರಕ್ತ ಶುದ್ಧಿಗೊಳಿಸುತ್ತದೆ. ಸಹಜವಾಗಿ ಇದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ.

ರೋಗ ನಿರೋಧಕ ಶಕ್ತಿ
ಬೆಲ್ಲದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್ ಮತ್ತು ಖನಿಜಾಂಶಗಳು ಇವೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಗುಣ  ಹೊಂದಿದೆ. ಹಾಗಾಗಿ ಬೆಲ್ಲ ಒಂದು ರೋಗ ನಿರೋಧಕ ಶಕ್ತಿಯಾಗಿಯೂ ಕೆಲಸ ಮಾಡಬಲ್ಲದು.

ಇದನ್ನೂ ಓದಿ.. ಆ ‘ವಿಶೇಷ ರಾತ್ರಿ’ ರೋಹಿತ್ ಶರ್ಮಾ ಜತೆಯಿದ್ದವರು ಯಾರು ಗೊತ್ತೇ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಬೊಜ್ಜು ದೇಹಕ್ಕೆ ಕಾರಣವಾಗುತ್ತವೆ ಈ ಆಹಾರಗಳು!