Webdunia - Bharat's app for daily news and videos

Install App

ಬೆಟ್ಟದ ನೆಲ್ಲಿಕಾಯಿ ಆಯಸ್ಸು ಹೆಚ್ಚಿಸುತ್ತದಂತೆ!

Webdunia
ಶನಿವಾರ, 17 ಡಿಸೆಂಬರ್ 2016 (13:54 IST)
ಬೆಂಗಳೂರು: ನೆಲ್ಲಿಕಾಯಿಯನ್ನು ತಿನ್ನಲು ಇಷ್ಟಪಡುವವರು ಯಾರಿಲ್ಲ ಹೇಳಿ? ಚಳಿಗಾಲದಲ್ಲಿ ನೆಲ್ಲಿಕಾಯಿ ಸೀಸನ್. ಬೆಟ್ಟದ ನೆಲ್ಲಿಕಾಯಿಯಲ್ಲಿ ಹಲವು ಆರೋಗ್ಯಕರ ಅಂಶಗಳಿವೆ. ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಇತರ ಉಪಯೋಗಗಳನ್ನು ತಿಳಿದುಕೊಳ್ಳೋಣ.

ಮಲಬದ್ಧತೆ ಹಾಗೂ ಇತರ ಸಮಸ್ಯೆಗಳಿಗೆ

ಮಲ ವಿಸರ್ಜಿಸುವಾಗ ನೋವು, ರಕ್ತ ಬರುತ್ತಿದ್ದರೆ, ಬೇಯಿಸಿ ಒಣಗಿಸಿದ ನೆಲ್ಲಿಕಾಯಿ ಚೂರನ್ನು ಮೊಸರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಬೇಧಿಯಾಗುತ್ತಿದ್ದರೂ, ನೆಲ್ಲಿಕಾಯಿ ಸೇವನೆ ಒಳ್ಳೆಯದು.

ರಕ್ತ ಪರಿಚಲನೆಗೆ

ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ದೇಹದಲ್ಲಿ ಉಷ್ಣತೆ ಸಮತೋಲನದಲ್ಲಿಡುವುದಲ್ಲದೆ, ರಕ್ತ ಪರಿಚಲನೆಯನ್ನು ಸುಗಮವಾಗಿಸುವುದು. ರಕ್ತ ಹೀನತೆಯಿಂದ ಬಳಲುತ್ತಿರುವವರೂ ಇದರ ಸೇವನೆ ಮಾಡುವುದು ಉತ್ತಮ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

ಆಯಸ್ಸು ಹೆಚ್ಚುತ್ತದಂತೆ!

ಇದರಲ್ಲಿ ನೀರಿನಲ್ಲಿರುವ ಶೇಕಡಾ 80 ರಷ್ಟು ಖನಿಜಾಂಶ, ನೀರು, ಕಾರ್ಬೋಹೈಡ್ರೇಟ್, ಮತ್ತು ಪ್ರೊಟೀನ್ ಗಳಿರುವುದರಿಂದ ದೇಹಕ್ಕೆ ಬೇಕಾದ ಶಕ್ತಿ ಮತ್ತು ಸಾಮರ್ಥ್ಯ ಒದಗಿಸುತ್ತದೆ. ಸಹಜವಾಗಿ ಇದರಿಂದ ನಮ್ಮ ಆಯಸ್ಸು ಹೆಚ್ಚುತ್ತದಂತೆ.

ಸೌಂದರ್ಯ ವರ್ಧಕ

ಮುಖದ ಕಾಂತಿಗೆ ನೆಲ್ಲಿಕಾಯಿ ಉತ್ತಮ. ನೆಲ್ಲಿಕಾಯಿ ಚೂರ್ಣ, ಕೂದಲು ಉದುರುವುದಕ್ಕೆ ಬಳಸುವ ಎಣ್ಣೆಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಸೌಂದರ್ಯ ವರ್ಧಕವಾಗಿಯೂ ಇದನ್ನು ಬಳಸಲಾಗುತ್ತದೆ.

ಇದಲ್ಲದೆ, ಹೃದಯದ ಮಾಂಸಖಂಡಗಳಿಗೆ ಶಕ್ತಿ ಒದಗಿಸುವುದು, ಮಲಬದ್ಧತೆ ನಿವಾರಿಸುವುದು, ವಯಸ್ಸಾಗದಂತೆ ತಡೆಗಟ್ಟುವುದು ಹೀಗೆ ನೆಲ್ಲಿಕಾಯಿ ಸೇವನೆಯಿಂದ ಅನೇಕ ಉಪಯೋಗವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments