Select Your Language

Notifications

webdunia
webdunia
webdunia
webdunia

ನಿಮ್ಮ ಮಕ್ಕಳಿಗೆ ಅಸ್ತಮಾ ಬರದಂತೆ ತಡೆಗಟ್ಟಲು ಇದನ್ನು ನೀಡಿ

ನಿಮ್ಮ ಮಕ್ಕಳಿಗೆ ಅಸ್ತಮಾ ಬರದಂತೆ ತಡೆಗಟ್ಟಲು ಇದನ್ನು ನೀಡಿ
ಬೆಂಗಳೂರು , ಶನಿವಾರ, 2 ಮಾರ್ಚ್ 2019 (08:47 IST)
ಬೆಂಗಳೂರು : ಸಾಮಾನ್ಯವಾಗಿ ಮಕ್ಕಳಿಗೆ ಅಲರ್ಜಿ ಸಮಸ್ಯೆ ಸಣ್ಣ ವಯಸ್ಸಿನಲ್ಲಿಯೇ ಕಾಡಲು ಶುರುವಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ, ಅಸ್ತಮಾ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದ ಮಕ್ಕಳನ್ನು ಕಾಪಾಡಲು ಈ ಆಹಾರವನ್ನು ನೀಡಿ.

ಸಂಶೋಧನೆಯೊಂದರ ಪ್ರಕಾರ, ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲ ಅಲರ್ಜಿ ವಿರುದ್ಧ ಮಕ್ಕಳು ಹೋರಾಡಲು ನೆರವಾಗುತ್ತದೆ. ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲದಲ್ಲಿ ಒಮೇಗಾ-3 ಮತ್ತು ಒಮೇಗಾ 6 ಕೊಬ್ಬಿನಾಂಶವಿರುತ್ತದೆ. ಇದನ್ನು ಆರ್ಕಿಡೋನಿಕ್ ಆ್ಯಸಿಡ್ ಎಂದು ಕರೆಯುತ್ತಾರೆ. ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ.

 

ಇದರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ ಅಸ್ತಮಾ, ಮೂಗಿನ ಉರಿ ಹಾಗೂ ತುರಿಕೆಯಂತ ಸಮಸ್ಯೆ ಕಾಡುವುದಿಲ್ಲ. 8ನೇ ವಯಸ್ಸಿನ ಮಕ್ಕಳ ರಕ್ತದಲ್ಲಿ ಒಮೆಗಾ-3 ಅಧಿಕ ಮಟ್ಟದಲ್ಲಿದ್ದರೆ ಅವರಿಗೆ 16ನೇ ವಯಸ್ಸಿನಲ್ಲಿ ಅಸ್ತಮಾ ಸೇರಿದಂತೆ ಮೂಗಿನ ಕಿರಿಕಿರಿ ಕಾಡುವುದಿಲ್ಲವಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ಸೇವಿಸಿದರೆ ಗಂಟಲು ನೋವು 3 ದಿನದಲ್ಲಿ ವಾಸಿಯಾಗುತ್ತೆ