Select Your Language

Notifications

webdunia
webdunia
webdunia
webdunia

ತಲೆ ಹೇನು ಓಡಿಸಲು ಸಿಂಪಲ್ ಉಪಾಯಗಳು

ತಲೆ ಹೇನು ಓಡಿಸಲು ಸಿಂಪಲ್ ಉಪಾಯಗಳು
Bangalore , ಶನಿವಾರ, 11 ಫೆಬ್ರವರಿ 2017 (11:37 IST)
ಬೆಂಗಳೂರು: ಶಾಲೆ ಹೋಗುವ ಹೆಣ್ಣು ಮಕ್ಕಳಿಗೆ ತಲೆ ಹೇನಿನದ್ದೇ ಸಮಸ್ಯೆ. ದಿನವಿಡೀ ಬೆವರಿ ಬೆಂಡಾಗುವುದರಿಂದಲೋ, ಕೂದಲು ಕೊಳೆಯಾಗುವುದರಿಂದಲೋ ತಲೆ ಹೇನು ಪಕ್ಕನೇ ಬರುತ್ತದೆ. ಇದಕ್ಕೆ ಮನೆಯಲ್ಲೇ ಮಾಡಬಹುದಾದ ಸಿಂಪಲ್ ಉಪಾಯಗಳಿವೆ.

 
ತೆಂಗಿನ ಎಣ್ಣೆಯನ್ನು ಚೆನ್ನಾಗಿ ತಲೆಗೆ ಹಚ್ಚಿಕೊಂಡು ಒಂದು ರಾತ್ರಿ ಕಳೆದು ಮರುದಿನ ಕೂದಲು ಬಾಚಿಕೊಳ್ಳಿ. ಎಣ್ಣೆ ಹಚ್ಚಿದಾಗ ಹೇನು ಓಡಲು ಸಾಧ್ಯವಾಗುವುದಿಲ್ಲ. ಇದಾದ ಮೇಲೆ ಒದ್ದೆ ಕೂದಲನ್ನು ಬಾಚಿದರೆ ಬೇಗನೇ ಹೇನು ಓಡಿಸಬಹುದು.

ವಿನೇಗರ್ ಮತ್ತು ಮಿನರಲ್ ಆಯಿಲ್ ಮಿಶ್ರ ಮಾಡಿ ರಾತ್ರಿ ಮಲಗುವ ಮೊದಲು ಕೂದಲುಗಳಿಗೆ ಹಚ್ಚಿಕೊಂಡು ತಲೆಗೆ ಬಟ್ಟೆ ಕಟ್ಟಿಕೊಂಡು ಮಲಗಿಕೊಳ್ಳಿ. ಬೆಳಿಗ್ಗೆ ಮಾಮೂಲಾಗಿ ಬಳಸುವ ಶ್ಯಾಂಪೂ ಬಳಸಿಕೊಂಡು ತಲೆ ಸ್ನಾನ ಮಾಡಿಕೊಳ್ಳಿ. ನಂತರ ತಲೆ ಬಾಚಿಕೊಳ್ಳಿ. ಇದನ್ನು ವಾರಕ್ಕೆ ಎರಡು ಮೂರು ಬಾರಿ ಮಾಡಿದರೆ ಹೇನು ನಾಶವಾಗಬಹುದು.

ಅಡುಗೆ ಮನೆಯಲ್ಲಿ ಬಳಸುವ ನಿಂಬೆ ಹಣ್ಣಿನಿಂದಲೂ ತಲೆ ಹೇನು ಹೋಗಿಸಬಹುದು. ನಿಂಬೆ ರಸವನ್ನು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ವಿನೇಗರ್ ಮತ್ತು ಹದ ಬಿಸಿ ನೀರಿನಲ್ಲಿ ತಲೆ ಕೂದಲು ನೆನೆಸಿ. ಇದನ್ನು ವಾರಕ್ಕೆ ಎರಡು ಮೂರು ಬಾರಿ ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್`ಗೆ ಹೋಗದೇ, ವರ್ಕೌಟ್ ಮಾಡದೇ ತೂಕ ಇಳಿಸುವುದು ಹೇಗೆ.. ಇಲ್ಲಿವೆ ಉಪಯುಕ್ತ ಟಿಪ್ಸ್