Select Your Language

Notifications

webdunia
webdunia
webdunia
webdunia

ಗ್ಯಾಸ್ಟ್ರಿಕ್ ಸಮಸ್ಯೆಗೆ ತೆಗೆದುಕೊಳ್ಳುವ ಮಾತ್ರೆಗಳು ಮೂತ್ರಪಿಂಡವನ್ನು ಹಾನಿಮಾಡಬಹುದು!

ಗ್ಯಾಸ್ಟ್ರಿಕ್ ಸಮಸ್ಯೆಗೆ ತೆಗೆದುಕೊಳ್ಳುವ ಮಾತ್ರೆಗಳು ಮೂತ್ರಪಿಂಡವನ್ನು ಹಾನಿಮಾಡಬಹುದು!
Bangalore , ಗುರುವಾರ, 23 ಫೆಬ್ರವರಿ 2017 (10:18 IST)
ಬೆಂಗಳೂರು: ಇಂದಿನ ದಿನ ಗ್ಯಾಸ್ಟ್ರಿಕ್,  ಅಸಿಡಿಟಿ ಸಮಸ್ಯೆಯಿಂದ ಬಳಲದವರು ಯಾರೂ ಇಲ್ಲ. ಈ ಸಮಸ್ಯೆಗೆ ಮಾತ್ರೆ ನುಂಗುವವರು ಒಮ್ಮೆ ಈ ಸುದ್ದಿಯನ್ನು ಓದಿಕೊಳ್ಳಿ.

 
ಗ್ಯಾಸ್ಟ್ರಿಕ್ ಸಮಸ್ಯೆಗೆಂದು  ತೆಗೆದುಕೊಳ್ಳುವ ಕೆಲವು ಮಾತ್ರಗಳು ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಹುಬಹುದು ಎಂದು ತಿಳಿದುಬಂದಿದೆ. ವಾಶಿಂಗ್ಟನ್ ವಿವಿಯ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರೆ.

“ಸುದೀರ್ಘ ಕಾಲ ಗ್ಯಾಸ್ಟ್ರಿಕ್ ನಿಯಂತ್ರಿಸುವ ಮಾತ್ರೆಗಳನ್ನು ಸೇವಿಸುವುದರಿಂದ ಮೂತ್ರಪಿಂಡ ನಿಧಾನವಾಗಿ ಗಂಭೀರ ಸಮಸ್ಯೆಗೆ ತುತ್ತಾಗಬಹುದು. ಕಿಡ್ನಿ ಫೈಲ್ಯೂರ್ ನಂತಹ ಗಂಭೀರ ಪರಿಣಾಮ ಎದುರಿಸಬೇಕಾದೀತು. ಹೀಗಾಗಿ ತೀರಾ ಅಗತ್ಯವಿದ್ದರೆ ಮಾತ್ರ ಇಂತಹ ಮಾತ್ರೆಗಳನ್ನು ಸೇವಿಸಿ” ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಸಾವಿರಾರು ಜನರನ್ನು ಸುಮಾರು 5 ವರ್ಷಗಳ ಕಾಲ ಸಮೀಕ್ಷೆ ನಡೆಸಿ ಅಧ್ಯಯನಕಾರರು ಈ ತೀರ್ಮಾನಕ್ಕೆ ಬಂದಿದ್ದಾರೆ.  ವೈದ್ಯರೂ ಕೂಡಾ ತಮ್ಮ ರೋಗಿಗಳಿಗೆ ಇಂತಹ ಮಾತ್ರೆ ಕೊಡುವ ಮೊದಲು ಎಚ್ಚರಿಕೆ ವಹಿಸಬೇಕೆಂಬು ಅವರ ಅಭಿಪ್ರಾಯ. ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆ ನುಂಗುವ ಬದಲು ಆದಷ್ಟು ತಿನ್ನುವ ಆಹಾರದಲ್ಲಿ ಜಾಗ್ರತೆ ವಹಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಕಲೇಟ್, ಚ್ಯೂಯಿಂಗ್ ಗಮ್ ಯಾಕೆ ಮಾರಕ?