Select Your Language

Notifications

webdunia
webdunia
webdunia
webdunia

ಭಾವೀ ಅಮ್ಮಂದಿರೇ ಇವುಗಳ ಬಗ್ಗೆ ಎಚ್ಚರವಾಗಿರಿ!

ಭಾವೀ ಅಮ್ಮಂದಿರೇ  ಇವುಗಳ ಬಗ್ಗೆ ಎಚ್ಚರವಾಗಿರಿ!
Bangalore , ಸೋಮವಾರ, 6 ಫೆಬ್ರವರಿ 2017 (10:34 IST)
ಬೆಂಗಳೂರು: ಗರ್ಭಿಣಿ ಮಹಿಳೆಯರ ಆರೋಗ್ಯ ಬಹಳ ಸೂಕ್ಷ್ಮವಾದುದು. ಸಿಕ್ಕಿದ್ದನ್ನೆಲ್ಲಾ ತಿನ್ನುವಂತಿಲ್ಲ,  ಬೇಕಾಬಿಟ್ಟಿ ಓಡಾಡುವಂತಿಲ್ಲ ಎಂದೆಲ್ಲಾ ಹಿರಿಯರು ಹೇಳುತ್ತಿದ್ದುದು ಇದೇ ಕಾರಣಕ್ಕೆ. ಭಾವೀ ಅಮ್ಮಂದಿರು ಎಚ್ಚರದಿಂದಿರಬೇಕಾದ ಕೆಲವು ಸೋಂಕುಗಳು ಯಾವುವು ನೋಡೋಣ.

 
ಹೆಪಟೈಟಿಸ್ ಬಿ
ಹೆಪಟೈಟಿಸ್ ಬಿ ನೇರವಾಗಿ ಪಿತ್ತ ಜನಕಾಂಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಳದಿ ರೋಗ ಬರುವುದಲ್ಲದೆ ಶಿಶು ಸಾವು, ಕಡಿಮೆ ತೂಕದ ಮಗು ಅಥವಾ ಅವಧಿ ಪೂರ್ಣ ಹೆರಿಗೆಯಾಗುವ ಸಂಭವವಿರುತ್ತದೆ.

ಹೆಪಟೈಟಿಸ್ ಸಿ
ಇದರ ಪ್ರಮುಖ ಲಕ್ಷಣ ವಾಕರಿಕೆ ಬರುವಂತಾಗುವುದು. ಇಂತಹ ಲಕ್ಷಣಗಳಿದ್ದಾಗ ಹಲವರು ಇದನ್ನು ಮಾರ್ನಿಂಗ್ ಸಿಕ್ ನೆಸ್ ಎಂದು ಕಡೆಗಣಿಸುತ್ತಾರೆ.  ಇದನ್ನು ಹಾಗೇ ಬಿಟ್ಟರೆ ಮಗುವಿಗೂ ಇದರ ಪರಿಣಾಮ ತಗಲಬಹುದು.

ಮೂತ್ರ ನಾಳದ ಸೋಂಕು
ಚರ್ಮ, ಯೋನಿ ಅಥವಾ ಗುಪ್ತಾಂಗದ ಬ್ಯಾಕ್ಟೀರಿಯಾ ಪ್ರವೇಶದಿಂದಾಗಿ ಮೂತ್ರನಾಳದ ಸೋಂಕುಂಟಾಗಬಹುದು.

ಲೈಂಗಿಕ ಖಾಯಿಲೆಗಳು
ಈ ಸಂದರ್ಭದಲ್ಲಿ ಲೈಂಗಿಕ ಸೋಂಕು ಉಂಟಾಗುವುದು ಬಹಳ ಬೇಗ. ಇದರ ಲಕ್ಷಣ ಬೇಗನೇ ಪತ್ತೆಯಾಗದಿದ್ದರೂ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ.

ದಡಾರ
ಈ ಮೊದಲು ದಡಾರ ರೋಗ ಬಾರದೇ ಇರುವ ಮಹಿಳೆಯರಲ್ಲಿ ಗರ್ಭಿಣಿಯಾಗಿರುವಾಗ ಬರುವ ಸಂಭವ ಹೆಚ್ಚು. ಇದು ಮಗುವಿನ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು.

ಸರ್ಪಸುತ್ತು
ಇದು ಮೊದಲ ಮೂರು ತಿಂಗಳ ಅವಧಿಯಲ್ಲಿ ಬಂದರೆ ಚಿಕಿತ್ಸೆಗೊಳಪಡಿಸಬಹುದು. ಆದರೆ ನಂತರದ ಹಂತದಲ್ಲಿ ಬಂದರೆ ನಿಮ್ಮ ಇಡೀ ದೇಹಕ್ಕೆ ಹರಡದಂತೆ ತಡೆಯಲು ಶಸ್ತ್ರಚಿಕಿತ್ಸೆಯ ನೆರವು ಪಡೆಯಬೇಕಾದೀತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಡಾರ ಮತ್ತು ರುಬೆಲ್ಲಾ ರೋಗ ತಡೆಗಟ್ಟಲು ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿ!