Select Your Language

Notifications

webdunia
webdunia
webdunia
webdunia

ತೂಕ ಇಳಿಕೆ, ಹಲವು ಸಮಸ್ಯೆಗೆ ಬೆಲ್ಲಾ ಸೇವಿಸಿ

ತೂಕ ಇಳಿಕೆ, ಹಲವು ಸಮಸ್ಯೆಗೆ ಬೆಲ್ಲಾ ಸೇವಿಸಿ
ದೆಹಲಿ , ಬುಧವಾರ, 7 ಸೆಪ್ಟಂಬರ್ 2016 (12:10 IST)
ಬೆಲ್ಲಾ ಅಡುಗೆಯಲ್ಲಿ ಬಳಸಲಾಗುವ ಪದಾರ್ಥಗಳಲ್ಲಿ ಒಂದು. ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಬೆಲ್ಲಾ ಮಲಬದ್ಧತೆ ಹಾಗೂ ತೂಕ ಇಳಿಕೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಜ್ವರ ಶೀತ,ಕೆಮ್ಮು ಇದ್ದರೆ ಬೆಲ್ಲ ಸೇವಿಸಬಹುದು. ಕರುಳು ಸರಿಯಾಗಿ ಕೆಲಸ ಮಾಡಲು ಬೆಲ್ಲಾ ಸಹಾಯಕಾರಿಯಾಗುತ್ತದೆ. 
ಬೆಲ್ಲಾ ಸೇವನೆಯಿಂದ ಆಗುವ ಹಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ.
 

ಮೂತ್ರದ ಸಮಸ್ಯೆಗೆ: ಮೂತ್ರದಲ್ಲಾಗುವ  ಹಲವು ಸಮಸ್ಯೆಗಳನ್ನು ಬೆಲ್ಲಾ ತಡೆಗಟ್ಟುತ್ತದೆ. ಕರುಳಿನ ಸಂಬಂಧಿತ ಕಾಯಿಲೆಯನ್ನು ನಿವಾರಿಸುತ್ತದೆ. ಅಲ್ಲದೇ ಮಲಬದ್ಧತೆ ತೊಂದರೆ ಇದ್ದರೆ ಬೆಲ್ಲಾ ಸೇವಿಸಿ..
 
 
ನಿಯಮಿತವಾಗಿ ಬೆಲ್ಲಾ ಸೇವಿಸುವುದರಿಂದ ಗಂಟಲಿನ ಊತ, ಉಸಿರಾಟದ ಸಮಸ್ಯೆ ಹಾಗೂ ಅಸ್ತಮಾ ಸಮಸ್ಯೆಯು ನಿವಾರಣೆಯಾಗುತ್ತದೆ. 
 
ಖನಿಜಗಳು,ಪೊಟ್ಯಾಶಿಯಂ, ಹಾಗೂ ಮೆಗ್ನೇಸಿಯಮ್, ಕಬ್ಬಿಣ,ಕ್ಯಾಲ್ಸಿಯಂ ಅಂಶಗಳು ಬೆಲ್ಲಾದಲ್ಲಿ ಇರುವುದರಿಂದ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. 
 
ಜ್ವರದ ಲಕ್ಷಣಗಳು ಕಂಡು ಬಂದರೆ ಬೆಲ್ಲಾ ಸೇವಿಸುವುದು ಉತ್ತಮ. ಶೀತ, ಕೆಮ್ಮು ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಿಂದ ಬೆಲ್ಲವನ್ನು ಬೆರಸಿ ಕುಡಿಯಬೇಕು. 
 
ಇನ್ನೂ ಮುಖ್ಯವಾಗಿ ಬೆಲ್ಲದಿಂದಾಗುವ ಅಚ್ಚರಿ ಉಪಯೋಗವೆಂದರೆ, ತೂಕ ಇಳಿಕೆ ಮಾಡುವಲ್ಲಿ ಬೆಲ್ಲಾ ಸಹಾಯಕಾರಿಯಾಗುತ್ತದೆ. ಚಯಾಪಚಯ ಕ್ರಿಯೆ, ಸ್ನಾಯುಗಳನ್ನು ಗಟ್ಟಿಮಾಡಲು, ಹಾಗೂ ತೂಕ ಸಮತೋಲನ ಕಾಪಾಡಿಕೊಂಡು ಬರಲು ಬೆಲ್ಲ ಸಹಾಯ ಮಾಡಬಲ್ಲದ್ದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರ! ಜೀವಕ್ಕೆ ಮಾರಕವಾಗದಿರಲಿ ಬಾಡಿಫಿಟ್ನೆಸ್