Select Your Language

Notifications

webdunia
webdunia
webdunia
webdunia

ಫಾಸ್ಟ್ ಫುಡ್ ನ್ನು ಮಕ್ಕಳ ಹೆಲ್ದಿ ಫುಡ್ ಅನ್ನಾಗಿ ಪರಿವರ್ತಿಸುವುದು ಹೇಗೆ..?

ಫಾಸ್ಟ್ ಫುಡ್ ನ್ನು ಮಕ್ಕಳ ಹೆಲ್ದಿ ಫುಡ್ ಅನ್ನಾಗಿ ಪರಿವರ್ತಿಸುವುದು ಹೇಗೆ..?
ಬೆಂಗಳೂರು , ಭಾನುವಾರ, 2 ಜುಲೈ 2017 (17:09 IST)
ಬೆಂಗಳೂರು:ಆಧುನಿಕ ಜೀವನದ ಭರಾಟೆಯಲ್ಲಿ ಯಾರಿಗೂ ಹೆಚ್ಚು ಸಮಯವೇ ಇಲ್ಲ. ಹಾಗಾಗಿ ನಾವೆಲ್ಲರೂ ನಮ್ಮ ಮಕ್ಕಳನ್ನು ಫಾಸ್ಟ್ ಫುಡ್ ಗೆ ಒಗ್ಗೂಡಿಸಿ ಬಿಟ್ಟಿದ್ದೇವೆ. ಫಾಸ್ಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಇಂದಿನ ಸಮಯವಿಲ್ಲದ ಜೀವನ ಶೈಲಿಯಲ್ಲಿ ಅದು ಅನಿವಾರ್ಯ ಎಂಬಂತಾಗಿಬಿಟ್ಟಿದೆ. ನಮ್ಮ ಬಿಸಿ ಶೆಡ್ಯೂಲ್ ಗಳ ಮಧ್ಯೆಯೂ ಮಕ್ಕಳಿಗೆ ಸ್ವಲ್ಪ ಫಾಸ್ಟ್ ಫುಡ್, ಅನ್ ಹೆಲ್ಡಿ ಫುಡ್ ಗಳಿಂದ ದೂರವಿರುವಂತೆ ನೋಡಿಕೊಳ್ಳಬಹುದು. ಅಂತಹ ಕೆಲವು ಅಂಶಗಳ ಬಗ್ಗೆ ಅನುಭವಿ ಡೈಯಟಿಷಿಯನ್ಸ್ ನೀಡಿರುವ ಸಲಹೆ ಇಲ್ಲಿದೆ.

1. ಸಾಧ್ಯವಾದ ಮಟ್ಟಿಗೆ ಮಕ್ಕಳಿಗೆ ಮನೆಯಿಂದನೆ ತಿಂಡಿ-ತಿನಿಸುಗಳನ್ನು ಹಾಕಿ ಕಳಿಸಿ. ಇಲ್ಲವಾದಲ್ಲಿ ಯಾವುದಾದರೂ ಗ್ರಾಸರಿ ಅಂಗಡಿಯಲ್ಲಿ ನಿಂತು ಹೆಲ್ದಿಯಾದ ಹಣ್ಣು, ಡ್ರೈ ಫ್ರೂಟ್ಸ್, ಚೀಸ್ ಸ್ಟಿಕ್ಸ್, ಯೊಗಾರ್ಟ್ ಗಳನ್ನು ತೆಗೆದುಕೊಂಡು ಕಳಿಸಿ. ಜಿರೋ ಕ್ಯಾಲರಿ ಇರುವ ಆಹಾರಗಳನ್ನು ನೀಡುವುದು ಉತ್ತಮ.
 
2. ನಿಮ್ಮಮಕ್ಕಳ ವರ್ಷಕ್ಕೆ ತಕ್ಕಂತೆ ಮಕ್ಕಳ ಊಟವನ್ನು ಸಿದ್ಧಪಡಿಸಿ. ಮಕ್ಕಳು ಯಾವತ್ತೂ ಕಡಿಮೆ ಪ್ರಮಾಣದಲ್ಲಿ ಊಟಮಾಡುವುದರಿಂದ ಉತ್ತಮವಾದ ಆಹಾರಗಳನ್ನು ಹೆಚ್ಚು ನೀಡುವುದು ಒಳ್ಳೆಯದು. 
 
3. ಮಕ್ಕಳಿಗೆ ಹೆಚ್ಚಾಗಿ ಫ್ರೈಡ್ ಐಟಂ ಗಳಿಗಿಂತ ಫ್ರೂಟ್ ಐಟಮ್ ಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳಿ. ಅವರ ಊಟದಲ್ಲಿ ಹೆಚ್ಚು ತರಕಾರಿ, ಡ್ರೈ ಫ್ರೂಟ್ಸ್, ಹಣ್ಣುಗಳು ಇರುವಂತೆ ನೋಡಿಕೊಳ್ಳಿ. ಇದರಿಂದ ಬೆಳೆಯುವ ಮಕ್ಕಳ ಬಾಡಿ ಮೆಟಾಪಾಲಿಸಂ ಬ್ಯಾಲೆನ್ಸ್ ಆಗಿರುವಂತೆ ನೋದಿಕೊಳ್ಳುತ್ತದೆ.
 
4. ನಿಮ್ಮ ಮಕ್ಕಳ ಜತೆ ನೀವೂ ಕೂಡ ಊಟವನ್ನು ಹಂಚಿಕೊಳ್ಳಿ. ಇದರಿಂದ ನೀವು ತೆಗೆದುಕೊಳ್ಳುವ ಆಹಾರದ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇನ್ನು ಮಕ್ಕಳಿಗೆ ಗ್ರಿಲ್ಡ್ ಚಿಕನ್ ಸ್ಯಾಂಡ್ ವಿಚ್ ಗಳನ್ನು ಕೊಡಿಸಿ ಇದರಿಂದ ಮಕ್ಕಳಿಗೂ ಫಾಸ್ಟ್ ಫುಡ್ ತಿಂದ ಹಾಗೂ ಆಗತ್ತೆ. ಜತೆಗೆ ಕರಿದ ತಿನಿಸುಗಳನ್ನು ಅವಾಯ್ಡ್ ಮಾಡಿದ ಹಾಗೂ ಆಗತ್ತೆ. ಫ್ರೈಡ್ ಚಿಕನ್ ಗಿಂತ ಮಕ್ಕಳಿಗೆ ಗ್ರಿಲ್ಡ್ ಚಿಕನ್ ಉತ್ತಮ.
 
5.ಫ್ರೆಂಚ್ ಫ್ರೈಸ್, ಅನಿಯನ್ ರಿಂಗ್ಸ್, ಐಸ್ ಕ್ರೀಮ್ ಗಳನ್ನು ನೀಡುವ ಬದಲು ಮಕ್ಕಳಿಗೆ ಫ್ರೆಶ್ ಫ್ರೂಟ್ಸ್, ವೆಜಿಟೇಬಲ್ಸ್ ಗಳನ್ನು ನೀಡುವುದು ಉತ್ತಮ.
 
6. ಟೀನೇಜ್ ಮಕ್ಕಳು ಹೆಚ್ಚು ಹೆಲ್ದಿ ಆಹಾರಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳಿ. ಅವರು ಕಡಿಮೆ ಕ್ಯಾಲರೀಸ್ ಇರುವ ಆಹಾರ ತೆಗೆದುಕೊಳ್ಳುವಂತೆ ಕಲಿಸಿ. ಸಾಮಾನ್ಯವಾಗಿ ಟೀನೇಜರ್ಸ್ ತಮ್ಮ ಇಷ್ಟದ ಆಹಾರ ಸೇವಿಸಲು ಮುಂದಾಗುತ್ತಾರೆ. ಆದಾಗ್ಯೂ ನೀವು ನಿಮ್ಮ ಸಲಹೆಯನ್ನು ನೀಡಿ ಮನವೊಲಿಸುವುದು ಉತ್ತಮ. ಮಕ್ಕಳಿಗೆ ಉತ್ತಮ ಆಹಾರ ತೆಗೆದುಕೊಳ್ಳಲು ಕಲಿಸುವುದರಿಂದ ಮಕ್ಕಳು ಕೂಡ ಒಳ್ಳೆ ಆಹಾರವನ್ನೇ ಆಯ್ಕೆ ಮಾಡಿ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಪಲ್ ಸ್ವೀಟ್ ರೆಸಿಪಿ ಈ ಬೀಟ್ರೂಟ್ ಹಲ್ವಾ