ಈ ಮೈಗ್ರೇನ್ ತಲೆ ನೋವಿನಿಂದ ಪಾರಾಗಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಇದು ಒಂದು ಅಥವಾ ಎರಡು ದಿನಗಳ ಕಾಲ ನಿಮ್ಮನ್ನು ಕಾಡದೆ ಬಿಡದು. ಸುಮಾರು ಜನರು ಮೈಗ್ರೇನ್ ತಲೆನೋವು ನಮಗೆ ವಾರದಲ್ಲಿ ಅನೇಕ ಬಾರಿ ಕಾಡುತ್ತದೆ ಎಂದು ಹೇಳುವುದನ್ನು ನಾವು ನೋಡುತ್ತೇವೆ.
ತುಂಬಾ ಜನರು ಆಗಾಗ ತುಂಬಾ ತಲೆ ನೋಯುತ್ತಿದೆ ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಆದರೆ ಇದರಲ್ಲೂ ತಲೆನೋವು ಬಂದರೆ ಮಾತ್ರ ತಲೆನೋವು ಇದೆ ಅಂತ ಹೇಳಿ ದಿನವಿಡೀ ಹಾಸಿಗೆ ಬಿಟ್ಟು ಎದ್ದೇಳುವುದೇ ಇಲ್ಲ.ಈ ನೋವು ಅನುಭವಿಸಿದವರಿಗೆ ಗೊತ್ತು ಅದರ ಭಾರೀ ಪರಿಣಾಮ, ದೈನಂದಿನ ಯಾವುದೇ ಕೆಲಸವನ್ನು ಮಾಡಲು ಈ ನೋವು ಬಿಡುವುದಿಲ್ಲ.
ಈ ಮೈಗ್ರೇನ್ ತಲೆ ನೋವಿನಿಂದ ಪಾರಾಗಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಇದು ಒಂದು ಅಥವಾ ಎರಡು ದಿನಗಳ ಕಾಲ ನಿಮ್ಮನ್ನು ಕಾಡದೆ ಬಿಡದು. ಸುಮಾರು ಜನರು ಮೈಗ್ರೇನ್ ತಲೆನೋವು ನಮಗೆ ವಾರದಲ್ಲಿ ಅನೇಕ ಬಾರಿ ಕಾಡುತ್ತದೆ ಎಂದು ಹೇಳುವುದನ್ನು ನಾವು ನೋಡುತ್ತೇವೆ.
ಹೀಗೆ ಈ ಮೈಗ್ರೇನ್ ತಲೆನೋವು ಏಕೆ ಬರುತ್ತದೆ ಎಂದು ಸುಮಾರು ಬಾರಿ ಮೈಗ್ರೇನ್ ತಲೆನೋವಿನಿಂದ ಬಳಲುವಂತಹ 181 ಜನರನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆಯಿಂದ ಪ್ರಯೋಗಿಕವಾಗಿ ತೆಗೆದುಕೊಂಡು ಪರೀಕ್ಷೆ ಮಾಡಿದರೆ ಆಗ ಅವರಿಗೆ ಕೊಬ್ಬಿನಾಂಶಗಳ ಕೊರತೆಯಿಂದ ಈ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುತ್ತದೆ ಎಂದು ತಿಳಿದು ಬಂದಿತು. ಒಮೆಗಾ 3 ಎನ್ನುವ ಕೊಬ್ಬಿನಾಮ್ಲಗಳ ಕೊರತೆಯಿಂದ ನಮಗೆ ಈ ಮೈಗ್ರೆನ್ ತಲೆನೋವು ಬರುತ್ತದೆ ಎಂದು ಕಂಡುಕೊಂಡ ವೈದ್ಯರು ಇದೀಗ ಮೈಗ್ರೇನ್ನಿಂದ ಬಳಲುವವರು ಹೆಚ್ಚಾಗಿ ಮೀನುಗಳನ್ನು ಸೇವಿಸಿರಿ ಎಂದು ಸಲಹೆ ನೀಡಿದ್ದಾರೆ.
ನಮ್ಮ ದೇಹಕ್ಕೆ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಅತಿ ಅವಶ್ಯಕವಾಗಿ ಬೇಕು. ಒಮೆಗಾ 6 ಕೊಬ್ಬಿನಾಮ್ಲಗಳು ಹೆಚ್ಚಾಗಿ ನಾವು ತಿನ್ನುವ ತರಕಾರಿಗಳಲ್ಲಿ ಕಂಡು ಬಂದರೆ, ಒಮೆಗಾ 3 ಕೊಬ್ಬಿನಾಮ್ಲಗಳು ಮೀನುಗಳಲ್ಲಿ ಕಂಡು ಬರುತ್ತದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಂಡವರು ತಮ್ಮ ಆಹಾರದಲ್ಲಿ ಮಾಡಿಕೊಂಡ ಕೆಲ ಬದಲಾವಣೆಗಳಿಂದ ಹಲವು ಪ್ರಯೋಜನಗಳಾಗಿರುವುದನ್ನು ಕಂಡುಕೊಂಡಿದ್ದಾರೆ. ಕೆಲವು ತಿಂಗಳುಗಳ ಕಾಲ ಅವರು ಹೆಚ್ಚಾಗಿ ಮೀನಿನ ಸೇವನೆ ಮಾಡಿದ್ದು, ಅವರ ತಲೆನೋವು ಎಲ್ಲವು ಮಾಯವಾಗಿರುವುದನ್ನು ಗಮನಿಸಿದರು.
ಹೊಸ ಆಹಾರಕ್ರಮವನ್ನು ಅನುಸರಿಸಿದ ಇತರರು ಸಹ ಕಡಿಮೆ ತಲೆನೋವನ್ನು ಅನುಭವಿಸಿದ್ದಾರೆ. ಮೊದಲು ಹುರಿದ ಚಿಕನ್, ಫ್ರೆಂಚ್ ಫ್ರೈಗಳು ಮತ್ತು ಒಮೆಗಾ -6 ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ತರಕಾರಿ ಎಣ್ಣೆಗಳಲ್ಲಿ ಬೇಯಿಸಿದ ಆಲೂಗಡ್ಡೆ ಚಿಪ್ಸ್ ನಂತಹ ಆಹಾರವನ್ನು ಸೇವಿಸುತ್ತಿದ್ದರು.
ಈಗ ತಮ್ಮ ಆಹಾರವನ್ನು ಬದಲಾಯಿಸಿಕೊಂಡಿದ್ದಾರೆ ಮತ್ತು ಈಗ ಆಲೀವ್ ಎಣ್ಣೆಯಲ್ಲಿ ಅಡುಗೆ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ಹೆಚ್ಚಾಗಿ ಮಹಿಳೆಯರಲ್ಲಿ ಈ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುತ್ತದೆ ಮತ್ತು ಇದರಿಂದ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನೀವು ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದರೆ ಮೀನಿನ ಸೇವನೆಯನ್ನು ಹೆಚ್ಚಾಗಿ ಮಾಡಿ ಎಂದು ವೈದ್ಯರು ಸಹ ಹೇಳುತ್ತಾರೆ.
ಸ್ವಂತವಾಗಿ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಲು ಇಚ್ಛಿಸಿದರೆ ಒಮೆಗಾ 3 ಸೇವನೆಯನ್ನು ಹೆಚ್ಚಿಸುವ ಸರಳ ಮಾರ್ಗವೆಂದರೆ ಹೆಚ್ಚು ಕೊಬ್ಬಿನಾಂಶ ವಿರುವಂತಹ ಮೀನುಗಳನ್ನು ತಿನ್ನುವುದು ಎಂದು ಸಂಶೋಧಕರು ಹೇಳಿದ್ದಾರೆ. ನೀವು ಸಸ್ಯಾಹಾರಿಗಳಾಗಿದ್ದರೆ, ಒಮೆಗಾ 3 ಕೊಬ್ಬಿನಾಂಶವಿರುವ ಅಗಸೆ ಬೀಜಗಳು ಮತ್ತು ವಾಲ್ನಟ್ಗಳನ್ನು ಸೇವಿಸಿರಿ.