ಬೆಂಗಳೂರು : ಮನೆಯಲ್ಲಿ ನೆಲದ ಮೇಲೆ ಎಣ್ಣೆ ಜಿಡ್ಡಿನ ಕಲೆಗಳು, ಉಕ್ಕಿನ ಕಲೆಗಳು ಕಂಡುಬರುತ್ತದೆ, ಇದನ್ನು ಸ್ಚಚ್ಚಗೊಳಿಸುವುದು ತುಂಬಾ ಕಠಿಣವಾದ ಕೆಲಸ. ಹಾಗಾಗಿ ಅದಕ್ಕಾಗಿ ಡಿಟರ್ಜೆಂಟ್ ಮತ್ತು ಲಿಕ್ವಿಡ್ ಕ್ಲೀನರ್ ಗಳಂತಹ ವಿಷಕಾರಿ ವಸ್ತುಗಳನ್ನು ಬಳಸುವ ಬದಲು ಮನೆಯಲ್ಲಿಯೇ ಹಣ್ಣಿನ ಸಿಪ್ಪೆಯಲ್ಲಿ ಕ್ಲೀನರ್ ತಯಾರಿಸಿ ಬಳಸಿ.
ಸಿಟ್ರಸ್ ಹಣ್ಣಿನ ಸಿಪ್ಪೆ, ಕಂದು ಸಕ್ಕರೆ ಅಥವಾ ಬೆಲ್ಲ. ಯಿಸ್ಟ್ ಮತ್ತು ನೀರನ್ನು ಮಿಶ್ರಣ ಮಾಡಿ ಒಂದು ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಒಂದು ತಿಂಗಳ ಬಳಿಕ ಅದು ದ್ರವವನ್ನು ಬಿಡುಗಡೆ ಮಾಡುತ್ತದೆ. ಇದನ್ನು ಜಿಡ್ಡಿನ ಕಲೆಗಳು, ಉಕ್ಕಿನ ಕಲೆಗಳ ಮೇಲೆ ಹಾಕಿ ಉಜ್ಜಿದರೆ ಬೇಗ ಕ್ಲೀನ್ ಆಗುತ್ತದೆ.