ಬೆಂಗಳೂರು: ಹಾಲು ಆರೋಗ್ಯಕ್ಕೆ ಉತ್ತಮ ಎನ್ನುವುದೇನೋ ನಿಜ. ಆದರೆ ಹಾಲು ಕುಡಿಯುವಾಗ ಜತೆಗೆ ಏನಾದರೂ ಸೇವಿಸುವ ಅಭ್ಯಾಸವಿದ್ದರೆ ಈ ಸುದ್ದಿ.
ಹಾಲಿನ ಜತೆ ಹುಳಿ ಬೇಡ
ಹಾಲು ಕುಡಿಯುವಾಗ ಹುಳಿ ಟೇಸ್ಟ್ ಕೊಡುವ, ಅಸಿಡಿಟಿ ಉಂಟುಮಾಡುವ ಆಹಾರ ವಸ್ತುಗಳನ್ನು ಸೇವಿಸಬೇಡಿ. ಸಿಹಿ ಹಾಲಿನೊಂದಿಗೆ ವಿಟಮಿನ್ ಸಿ ಅಂಶವಿರುವ ಹುಳಿ ಆಹಾರ ವಸ್ತು ಜತೆಯಾಗಲೇಬಾರದು.
ಹಾಲು ಹಣ್ಣು ಬೇಡ
ಹಾಲಿನ ಜತೆಗೆ ಹಣ್ಣು ಸೇವಿಸುವ ಅಭ್ಯಾಸ ಹೆಚ್ಚಿನವರಿಗಿರಬಹುದು. ಆಯುರ್ವೇದದ ಪ್ರಕಾರ ಹಾಲಿನ ಜತೆಗೆ ಹಣ್ಣು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ಹಾಲಿನ ಜತೆಗೆ ಸೇವಿಸಬಹುದಾದ ಒಂದೇ ಒಂದು ಹಣ್ಣು ಎಂದರೆ ಬಾಳೆಹಣ್ಣು. ಅದಲ್ಲದೆ, ಚಾಟ್ ಆಹಾರ ವಸ್ತುಗಳು, ಮಸಾಲೆ ಭರಿತ ಆಹಾರ ವಸ್ತುಗಳು ಸೇವಿಸುವಾಗ ಹಾಲು ಕುಡಿಯಲೇಬಾರದು ಎನ್ನುತ್ತಾರೆ ತಜ್ಞರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ