ಊಟವಾದ ತಕ್ಷಣ ಈ ಎರಡು ಕೆಲಸ ಮಾಡಲೇಬೇಡಿ!

Webdunia
ಸೋಮವಾರ, 3 ಜುಲೈ 2017 (16:40 IST)
ಬೆಂಗಳೂರು: ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ.

 
ಹಣ್ಣು ಸೇವನೆ
ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅಸಿಡಿಟಿಗೂ ಕಾರಣವಾಗಬಹುದು. ಹಾಗಾಗಿ ಎಚ್ಚರವಿರಲಿ.

ನಿದ್ರೆ
ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಕಣ್ಣು ನಿದ್ರಾ ದೇವಿಯತ್ತ ಸೆಳೆಯುವುದು ಸಹಜ. ಆದರೆ ನಿದ್ರೆ ಮಾಡಿದಾಗ ನಮ್ಮ ಜೀರ್ಣ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಅಥವಾ ಜೀರ್ಣ ಪ್ರಕ್ರಿಯೆ ನಿಧಾನವಾಗುತ್ತದೆ. ಇದು ಅಪಾಯಕಾರಿ. ಇದರಿಂದಲೂ ಅಜೀರ್ಣದ ಸಮಸ್ಯೆ ಬರಬಹುದು. ಅಷ್ಟೇ ಅಲ್ಲ, ಬೊಜ್ಜು ಬೆಳೆಯುವುದಕ್ಕೂ ಇದು ಕಾರಣವಾಗಬಹುದು. ಹಾಗಾಗಿ ಊಟವಾದ ತಕ್ಷಣ ಇವೆರಡೂ ಕೆಲಸಗಳನ್ನೂ ಖಂಡಿತಾ ಮಾಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿರಂತರವಾಗಿ ಎಷ್ಟು ನಿಮಿಷ ಮೊಬೈಲ್ ನೋಡಬಹುದು, ಹೆಚ್ಚು ನೋಡಿದರೆ ಏನಾಗುತ್ತದೆ ಇಲ್ಲಿದೆ ವಿವರ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments