Publish Date: Mon, 30 Jul 2018 (08:58 IST)
Updated Date: Mon, 30 Jul 2018 (09:00 IST)
ಬೆಂಗಳೂರು: ಹುಡುಗಿಯರ ಪರ್ಸ್, ವಯಸ್ಸು ಎರಡರ ಬಗ್ಗೆಯೂ ಪ್ರಶ್ನೆ ಮಾಡಬಾರದಂತೆ! ಅದೇ ರೀತಿ ಹುಡುಗರಲ್ಲೂ ಕೆಲವೊಂದು ವಿಚಾರಗಳನ್ನು ಕೇಳದೇ ಇದ್ದರೆ ಒಳ್ಳೆಯದು. ಅವರು ಯಾವುವು ನೋಡೋಣ.
ನೀನು ನನ್ನ ಲವ್ ಮಾಡ್ತೀಯಾ?
ನೀನು ನಿಜವಾಗಿ ನನ್ನ ಲವ್ ಮಾಡ್ತೀಯಾ? ನೀನು ನನ್ನ ಎಷ್ಟು ಇಷ್ಟಪಡ್ತೀಯಾ? ಇಂತಹ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಿದ್ದರೆ ಹುಡುಗರು ಕಿರಿ ಕಿರಿ ಅನುಭವಿಸುತ್ತಾರೆ.
ಹಳೆ ಗೆಳತಿ ಬಗ್ಗೆ ಕೆಣಕಬೇಡಿ
ಹಳೆ ಗರ್ಲ್ ಫ್ರೆಂಡ್ ಇಷ್ಟ, ಅವಳ ಜತೆ ಕಳೆದ ಕ್ಷಣಗಳ ಬಗ್ಗೆ ಕೇಳಿ ಪದೇ ಪದೇ ಕಿರಿ ಕಿರಿ ಮಾಡುತ್ತಿದ್ದರೆ ಆತನಿಗೆ ನೀವೂ ಬೋರ್ ಅನಿಸಬಹುದು.
ನಾನಾ? ಗೆಳೆಯರಾ?
ಹುಡುಗರು ಎಷ್ಟೇ ಒಳ್ಳೆಯ ಗರ್ಲ್ ಫ್ರೆಂಡ್ ಇದ್ದರೂ ತಮ್ಮ ಗೆಳೆಯರನ್ನು ಬಿಟ್ಟುಕೊಡರು. ಹಾಗಾಗಿ ಪದೇ ಪದೇ ನಿನಗೆ ನನಗಿಂತ ನಿನ್ನೆ ಗೆಳೆಯರೇ ಹೆಚ್ಚಾದ್ರಾ ಎಂದು ಪ್ರಶ್ನಿಸಬೇಡಿ.
ಹಾಗೆ ಮಾಡಬೇಡ!
ನೀನು ಇದು ಮಾಡಬೇಡ, ಈ ರೀತಿ ನಡೆದುಕೊಳ್ಳಬೇಡ ಎಂದು ಅತಿಯಾಗಿ ನಿಯಂತ್ರಣ ಹೇರಿದರೆ ಆತನಿಗೆ ನಿಮ್ಮ ಮೇಲೆ ಬೇಸರವುಂಟಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.