Select Your Language

Notifications

webdunia
webdunia
webdunia
webdunia

ಪಪ್ಪಾಯಿ ಬೀಜವನ್ನು ಬಿಸಾಕುವುದು ಬೇಡ

ಪಪ್ಪಾಯಿ ಬೀಜವನ್ನು ಬಿಸಾಕುವುದು ಬೇಡ
Bangalore , ಭಾನುವಾರ, 25 ಡಿಸೆಂಬರ್ 2016 (08:56 IST)
ಬೆಂಗಳೂರು: ಪಪ್ಪಾಯಿ ಹಣ್ಣು ತಿನ್ನಲು ಇಷ್ಟಪಡುತ್ತೇವೆ. ಆದರೆ ಹಣ್ಣು ತಿಂದಾದ ಮೇಲೆ ಬೀಜವನ್ನು ಕಸದ ಬುಟ್ಟಿಗೆ ಸೇರಿಸುತ್ತೇವೆ. ವಿಚಿತ್ರವಾದರೂ ಸತ್ಯ. ನಾವು ಕಸದ ಬುಟ್ಟಿಗೆ ಸೇರಿಸುವ ಇಂತಹ ಹಲವು ಆಹಾರ ವಸ್ತುಗಳಲ್ಲೇ ಹೆಚ್ಚಿನ ಪೋಷಕಾಂಶ ಇರುವುದು.


ಪಪ್ಪಾಯಿ ಬೀಜದಲ್ಲೂ ಹಲವು ಆರೋಗ್ಯಕರ ಅಂಶಗಳಿವೆ. ಇದರ ಬೀಜ ಸ್ವಲ್ಪ ಒಗರು ಎನಿಸಿದರೆ ಸಕ್ಕರೆ ಜತೆ ಸೇವಿಸಬಹುದು. ಇದರ ಉಪಯೋಗಗಳನ್ನುತಿಳಿದುಕೊಳ್ಳೋಣ.

ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಹೊಟ್ಟೆಯಲ್ಲಿ ಜಂತು ನಿವಾರಣೆಗೆ ಪಪ್ಪಾಯಿ ಬೀಜಗಳು ರಾಮಬಾಣದಂತೆ ಕೆಲಸ ಮಾಡುತ್ತದೆ. ಮಕ್ಕಳಿಗಂತೂ ಇದು ತುಂಬಾ ಉತ್ತಮ ಎನ್ನಲಾಗುತ್ತದೆ.  ಪಿತ್ತ ಜನಕಾಂಗದ ಸಿರೋಸಿಸ್ ರೋಗಕ್ಕೆ ಪಪ್ಪಾಯ ಬೀಜವನ್ನು ಬಳಸಲಾಗುತ್ತದಂತೆ. ನಿಂಬೆ ಪಾನಕದೊಂದಿಗೆ ಇದರ ಐದಾರು ಬೀಜಗಳನ್ನು ಪುಡಿ ಮಾಡಿ ಕುಡಿಯುವುದು ಉತ್ತಮ ಎನ್ನಲಾಗುತ್ತದೆ.  ಇದಲ್ಲದೆ ಡೆಂಗ್ಯು ಜ್ವರ ಪೀಡಿತರಿಗೆ ವಿದೇಶಗಳಲ್ಲೂ ಇದರ ಬೀಜದ ಪರಿಣಾಮಕಾರಿ ಬಳಕೆಯಾಗುತ್ತದಂತೆ.

ಆದರೆ ನೆನಪಿಡಿ. ಗರ್ಭಿಣಿ ಮಹಿಳೆಯರಿಗೆ ಇದರ ಸೇವನೆ ಅಪಾಯಕಾರಿ. ಅಲ್ಲದೆ, ಇನ್ನೂ ಮಕ್ಕಳಾಗದ ದಂಪತಿ ಕೂಡಾ ಪಪ್ಪಾಯ ಬೀಜ ಸೇವಿಸದೇ ಇರುವುದು ಉತ್ತಮ. ಇದು ಫರ್ಟಿಲಿಟಿಯನ್ನು ಕಡಿಮೆಗೊಳಿಸುವ ಗುಣವನ್ನೂ ಹೊಂದಿರುವ ಕಾರಣಕ್ಕೆ ಈ ಎಚ್ಚರಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೆಡ್ ಪಕೋಡಾ