Select Your Language

Notifications

webdunia
webdunia
webdunia
webdunia

ನಿಮ್ಮ ಮಕ್ಕಳಿಗೆ ಇದನ್ನು ನೀಡಲೇಬೇಡಿ

ನಿಮ್ಮ ಮಕ್ಕಳಿಗೆ ಇದನ್ನು ನೀಡಲೇಬೇಡಿ
Bangalore , ಸೋಮವಾರ, 24 ಏಪ್ರಿಲ್ 2017 (07:01 IST)
ಬೆಂಗಳೂರು: ರಜೆಯಲ್ಲಿ ಮಕ್ಕಳ ಜತೆ ಮಜಾ ಮಾಡಲು ಹೊರಗಡೆ ಸುತ್ತಾಡುತ್ತೀರಿ. ಮೊದಲೇ ಬೇಸಿಗೆ ಬೇರೆ. ಬಳಲಿ ಬೆಂಡಾದಾಗ ಕಣ್ಣಿಗೆ ಕಾಣುವ ಬಣ್ಣದ ತಂಪು ಪಾನೀಯಗಳು ಸೆಳೆಯುತ್ತವೆ.

 
ಆದರೆ ಎಚ್ಚರವಿರಲಿ. ಸೋಡಾ ಮತ್ತು ಕಾರ್ಬೋನೇಟ್ ಅಂಶವಿರುವ ಪಾನೀಯಗಳನ್ನು ನಿಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ನೀಡಬೇಡಿ. ಅದರಿಂದ ಬಾಯಾರಿಕೆ ನೀಗುವುದಕ್ಕಿಂತ ಅನಾಹುತವಾಗುವುದೇ ಹೆಚ್ಚು.

ಇಂತಹ ಪಾನೀಯಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಬೊಜ್ಜು,  ಮಧುಮೇಹ, ಸ್ವಭಾವದಲ್ಲಿ ಏರುಪೇರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಇಂತಹ ಪಾನೀಯಗಳಲ್ಲಿ ದೇಹಕ್ಕೆ ಅಗತ್ಯವಾದ ಯಾವುದೇ ಪೋಷಕಾಂಶಗಳಿರುವುದಿಲ್ಲ. ಬದಲಾಗಿ ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುವ ಅಂಶಗಳಿರುತ್ತವೆ ಎನ್ನಲಾಗಿದೆ. ಹಾಗಾಗಿ ಪೋಷಕರೇ ಎಚ್ಚರ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಕರೆ ಖಾಯಿಲೆ ಇದೆಯೇ ಎಂದು ಪತ್ತೆ ಹಚ್ಚುವುದು ಹೇಗೆ?