Webdunia - Bharat's app for daily news and videos

Install App

ರಾತ್ರಿ ಊಟದ ಬಳಿಕ ಈ ಆಹಾರಗಳನ್ನು ಸೇವಿಸಲೇಬೇಡಿ

Webdunia
ಶನಿವಾರ, 7 ಅಕ್ಟೋಬರ್ 2017 (08:18 IST)
ಬೆಂಗಳೂರು: ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು.

 
ಹಾಲು
ಹೆಚ್ಚಿನವರು ಊಟವಾದ ಬಳಿಕ ಹಾಲು ಕುಡಿಯುವುದು ಸಾಮಾನ್ಯ. ಆದರೆ ಹಾಲು ಕುಡಿಯುವುದು ಒಳ್ಳೆಯದಲ್ಲ ಎಂದರೆ ನೀವು ನಂಬಲೇ ಬೇಕು. ಊಟದ ಬಳಿಕ ಹಾಲು ಸೇವಿಸುವುದರಿಂದ ಅದರಲ್ಲಿರುವ ಲಾಕ್ಟೋಸ್ ಅಂಶ ನಿಮಗೆ ಜೀರ್ಣ ಸಂಬಂಧಿ ಸಮಸ್ಯೆ ತರಬಹುದು.

ಚಾಕಲೇಟ್
ಚಾಕಲೇಟ್ ನಲ್ಲಿರುವ ಕೆಫೈನ್ ಅಂಶ ನಿಮ್ಮ ನಿದ್ರೆಗೆ ಭಂಗ ತರಬಹುದು. ಸಹಜವಾಗಿ ರಾತ್ರಿ ಸರಿಯಾಗಿ ನಿದ್ರೆಯಾಗದಿದ್ದರೆ ಹಗಲು ಕೆಲಸ ಮಾಡಲು ತೊಂದರೆಯಾಗುತ್ತದೆ.

ಜ್ಯೂಸ್
ರಾತ್ರಿ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ.  ಹಣ್ಣಿನ ಜ್ಯೂಸ್ ಅಸಿಡಿಕ್ ರಿಯಾಕ್ಷನ್ ಉಂಟು ಮಾಡಬಹುದು. ಇದರಿಂದ ರಾತ್ರಿ ಎದೆಯುರಿಯಂತಹ ಸಮಸ್ಯೆಯಾಗಬಹುದು.

ಸೋಡಾ
ಊಟವಾದ ಬಳಿಕ ಸೋಡಾ ಕುಡಿಯುವುದರಿಂದ ಜೀರ್ಣ ಕ್ರಿಯೆ ಹದ ತಪ್ಪಬಹುದು. ಇದರಿಂದ ಅಸಿಡಿಟಿ ಉಂಟಾಗಬಹುದು.

ಪಿಜ್ಜಾ
ಪಿಜ್ಜಾ ಎಷ್ಟೇ ಇಷ್ಟ ಎಂದಾಗಿದ್ದರೂ ಊಟದ ಬಳಿಕ ಸೇವಿಸುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಕ್ಯಾಲೋರಿಯಿದ್ದು, ಊಟದ ಬಳಿಕ ಸೇವಿಸುವುದರಿಂದ ಅನಗತ್ಯ ಕೊಬ್ಬು ಸಂಗ್ರಹವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments