Webdunia - Bharat's app for daily news and videos

Install App

ನಿಮ್ಮ ಮಗುವಿನ ತ್ವಚೆ ಹೊಳೆಯಬೇಕಾ...? ಹಾಗಾದ್ರೆ ಈ ಎಣ್ಣೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ

Webdunia
ಗುರುವಾರ, 18 ಜನವರಿ 2018 (11:20 IST)
ಬೆಂಗಳೂರು : ಮಗುವಿನ ತ್ವಚೆ ತುಂಬಾ ಕೋಮಲವಾಗಿದ್ದು, ನಾಜೂಕಾಗಿರುತ್ತದೆ. ಮಗುವಿನ ತ್ವಚೆಯ ಆರೈಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಮಸ್ಯೆಗಳುಂಟಾಗುತ್ತದೆ. ಆದ್ದರಿಂದ ಮಗುವಿನ ತ್ವಚೆಯ ಬಗ್ಗೆ ತಾಯಿ ತುಂಬಾ ಎಚ್ಚರವಹಿಸಬೇಕಾಗುತ್ತದೆ. ಆಯಾ ಸೀಸನ್ ಗೆ ತಕ್ಕಂತೆ ಎಣ್ಣೆಗಳನ್ನು ಹಚ್ಚಿ ಸ್ನಾನ ಮಾಡಿಸುವುದರಿಂದ ಮಗುವಿನ ತ್ವಚೆಗೆ ಯಾವ ಸಮಸ್ಯೆಗಳಾಗದೆ ಹೊಳಪಿನಿಂದ ಕೂಡಿರುತ್ತದೆ.. ಆದ್ದರಿಂದ ಮೊದಲು ತಾಯಂದಿರು ಯಾವ ಸೀಸನ್ ನಲ್ಲಿ ಯಾವ ಎಣ್ಣೆಯನ್ನು ಮಗುವಿಗೆ ಹಚ್ಚಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

 
ಮಗುವಿಗೆ ಚಳಿಗಾಲ ಹಾಗು ಮಳೆಗಾಲದಲ್ಲಿ ಎಣ್ಣೆ ಸ್ನಾನ ಮಾಡಿಸುವಾಗ ಆಲೀವ್ ಆಯಿಲ್, ಬಾದಾಮಿ ಎಣ್ಣೆ ಅಥವಾ ಸಾಸಿವೆ ಎಣ್ಣೆ, ಇವು ಮೂರರಲ್ಲಿ ಯಾವುದಾದರೂ ಒಂದನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮಗುವಿನ ತ್ವಚೆ ಹೊಳಪಿನಿಂದ ಕೂಡಿರುತ್ತದೆ.



ಬೇಸಿಗೆ ಕಾಲದಲ್ಲಿ ಮಗುವಿಗೆ ಎಣ್ಣೆ ಸ್ನಾನ ಮಾಡಿಸುವಾಗ ಕೊಬ್ಬರಿ ಎಣ್ಣೆ, ಹರಳೆಣ್ಣೆ ಅಥವಾ ಎಳ್ಳೆಣ್ಣೆ ಇವು ಮೂರರಲ್ಲಿ ಯಾವುದಾದರೂ ಒಂದನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಹಚ್ಚಿ1 ಗಂಟೆ ಬಿಟ್ಟು ಸ್ನಾನ ಮಾಡಿಸಿ. ಇದು ಕೂಡ ಮಗುವಿನ ತ್ವಚೆಗೆ ತುಂಬಾ ಒಳ್ಳೆಯದು .ಆದರೆ ಈ ಎಲ್ಲಾ ಎಣ್ಣೆಗಳು 100% ಶುದ್ದವಾಗಿದೆಯೇ ಎಂದು ನೋಡಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ
Show comments