Select Your Language

Notifications

webdunia
webdunia
webdunia
webdunia

ಸುಂದರ ಹಲ್ಲು ನಿಮ್ಮದಾಗಬೇಕೇ? ಹೀಗೆ ಮಾಡಿ!

ಸುಂದರ ಹಲ್ಲು ನಿಮ್ಮದಾಗಬೇಕೇ? ಹೀಗೆ ಮಾಡಿ!
Bangalore , ಮಂಗಳವಾರ, 21 ಮಾರ್ಚ್ 2017 (10:31 IST)
ಬೆಂಗಳೂರು: ಹಲ್ಲು ಮತ್ತು ಬಾಯಿಯ ಆರೋಗ್ಯ ಚೆನ್ನಾಗಿದ್ದಷ್ಟು ಒಳ್ಳೆಯದು. ಎದುರಿಗಿದ್ದವರೂ ಸುರಕ್ಷಿತವಾಗಿರಬಹುದು! ಬಾಯಿ ಆರೋಗ್ಯವಾಗಿರಲು ಏನೆಲ್ಲಾ ಮಾಡಬೇಕು? ನೋಡೋಣ.

 

ಥ್ರೆಡ್ಡಿಂಗ್

 
ನಾವು ಎಷ್ಟೇ ಚೆನ್ನಾಗಿ ಬ್ರಷ್ ಮಾಡಿದರೂ, ಕೆಲವೊಮ್ಮೆ ಬ್ರಷ್ ತಲುಪದ ಜಾಗದಲ್ಲಿ ಆಹಾರ ತುಣುಕುಗಳು ಸೇರಿಕೊಂಡು ಕೆಟ್ಟ ವಾಸನೆಗೆ ಕಾರಣವಾಗುತ್ತದೆ. ಅದಕ್ಕೆ ದಿನಕ್ಕೊಮ್ಮೆ ಶುಚಿಯಾದ ನೂಲು ಬಳಸಿ ಬಾಯಿಯ ಮೂಲೆಯನ್ನೂ ಸ್ವಚ್ಛ ಮಾಡಿ.

 
ಎಣ್ಣೆ ಬಳಕೆ

 
ಹಿಂದಿನ ಕಾಲದವರು, ಬೆಳಿಗ್ಗೆ ಎದ್ದ ತಕ್ಷಣ ಬಾಯಿಗೆ ಎಣ್ಣೆ ಹಾಕಿಕೊಂಡು ಸ್ವಲ್ಪ ಹೊತ್ತು ಇಟ್ಟುಕೊಳ್ಳುವುದನ್ನು ನೋಡಿರಬಹುದು. ಶುದ್ಧವಾದ ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿಕೊಂಡು ಸ್ವಲ್ಪ ಹೊತ್ತು ಇಟ್ಟುಕೊಳ್ಳುವುದರಿಂದ, ವಸಡು ಗಟ್ಟಿಯಾಗುತ್ತದೆ.

 
ನಾಲಿಗೆ ಶುಚಿ ಮಾಡಿ

ನಾಲಿಗೆಯಲ್ಲಿರುವ ಬಿಳಿ ಪದರವನ್ನು ತೆಗೆಯುವ ಅಭ್ಯಾಸ ಮಾಡಿಕೊಳ್ಳಿ. ಪ್ರತಿನಿತ್ಯ ಹೀಗೆ ಮಾಡುತ್ತಿದ್ದರೆ, ಆಹಾರ ರುಚಿ ಬೇಗ ನಾಲಿಗೆ ಹತ್ತುವುದಲ್ಲದೆ, ಬಾಯಿ ವಾಸನೆಯಿಂದಲೂ ಮುಕ್ತಿ ಪಡೆಯಬಹುದು.

 

ಸರಿಯಾಗಿ ಬ್ರಷ್ ಮಾಡಿ

 
ಅರ್ಜೆಂಟಾಗಿ ಹೇಗೆ ಹೇಗೋ ಬ್ರಷ್ ಮಾಡುವುದನ್ನು ಬಿಡಿ. ನಿಧಾನವಾಗಿ ಎಲ್ಲಾ ಹಲ್ಲುಗಳಿಗೆ ತಲುಪುವಂತೆ ಮೇಲಿನಿಂದ ಕೆಳಕ್ಕೆ ಬ್ರಷ್ ಮಾಡಿ.

 
ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದು ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಜಾಸ್ತಿ ನೀರು ಕುಡಿಯುವುದರಿಂದ ಜೊಲ್ಲು ರಸ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ಹಲ್ಲು ತೂತು ಬೀಳುವುದು ತಪ್ಪುತ್ತದೆ ಮತ್ತು ಸುಲಭವಾಗಿ ಆಹಾರ ಜೀರ್ಣವಾಗುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಚರ್ಮದ ಕಾಂತಿ ಉಳಿಸಲು ಏನು ಮಾಡಬೇಕು?