Select Your Language

Notifications

webdunia
webdunia
webdunia
webdunia

ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಹೀಗೆ ಮಾಡಿ.

ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಹೀಗೆ ಮಾಡಿ.
Bangalore , ಗುರುವಾರ, 2 ಮಾರ್ಚ್ 2017 (12:19 IST)
ಬೆಂಗಳೂರು: ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಬರುವ ಸಮಸ್ಯೆ. ಇದರಿಂದ ಅವರಿಗೆ ಮಾತ್ರವಲ್ಲ, ಜತೆಯಲ್ಲಿರುವವರಿಗೂ ಕಿರಿ ಕಿರಿ. ಇದರಿಂದ ಮುಕ್ತರಾಗುವುದು ಹೇಗೆ?


ವಾಂತಿ ಬರುವುದಕ್ಕೆ ಹಲವು ಕಾರಣಗಳಿರಬಹುದು. ಒಂದು ವೇಳೆ ಆಹಾರ ಸೇವಿಸಿದ ತಕ್ಷಣ ಪ್ರಯಾಣ ಮಾಡುವುದರಿಂದ ಹೊಟ್ಟೆ ತೊಳೆಸಿದಂತಾಗುವುದಿದ್ದರೆ, ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡಿ. ಪ್ರಯಾಣಕ್ಕೂ ಮೊದಲೇ ಆದಷ್ಟು ಹಣ್ಣು, ತರಕಾರಿ, ನೀರಿನಂಶ ಸೇವಿಸಿ. ತಪ್ಪಿಯೂ ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ.

ಆದಷ್ಟು ವಾಹನ ಮುಂಬಾಗ ಕೂರಿ. ಹಿಂಭಾಗದಲ್ಲಿ ಜಂಪ್ ಆಗುವುದು ಜಾಸ್ತಿ. ಇದರಿಂದ ವಾಕರಿಕೆ ಬರಬಹುದು.ಪ್ರಯಾಣ ಮಾಡುವಾಗ ಆದಷ್ಟು ವಾಹನದ ಕಿಟಿಕಿ ತೆರೆದು, ಗಾಳಿಯಾಡುವ ಹಾಗೆ ಕುಳಿತುಕೊಳ್ಳಿ. ಪ್ರಯಾಣಕ್ಕಿಂತ ಎರಡು ಗಂಟೆ ಮೊದಲೇ ಆಹಾರ ಸೇವಿಸಿ. ಪ್ರಯಾಣಿಸುವಾಗ ಧೂಮಪಾನ ಮಾಡಬೇಡಿ.

ವಾಹನ ಏರುವ ಮುನ್ನ ಏಲಕ್ಕಿ ಬಾಯಲ್ಲಿ ಹಾಕಿಕೊಂಡು ಜಗಿಯುತ್ತಿರಿ. ಅಥವಾ ನಿಂಬೆ ಹಣ್ಣನ್ನು ಕೈಯಲ್ಲಿಟ್ಟುಕೊಂಡು ಆಗಾಗ ಅದರ ಸುವಾಸನೆ ಸವಿಯಿರಿ. ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ. ವಾಹನದಲ್ಲಿ ಕಾಲು ಚಾಚಿಕೊಂಡು, ನಿದ್ದೆ ಮಾಡಿ ಅಥವಾ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಿ. ಇನ್ನು ಕೆಲವರಿಗೆ ಆರೆಂಜ್, ಮಾವಿನ ಹಣ್ಣಿನ ಫ್ಲೇವರ್ ಇರುವ ಹುಳಿ-ಸಿಹಿ ಮಿಶ್ರಿತ ಚಾಕಲೇಟ್ ಗಳೂ ವಾಕರಿಕೆ ತಡೆಗಟ್ಟುತ್ತದೆ. ಮಾಡಿ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರುಬೆಲ್ಲಾ ಲಸಿಕೆ ಅಭಿಯಾನ ವಿಸ್ತರಣೆ