Webdunia - Bharat's app for daily news and videos

Install App

ಪ್ರತಿದಿನ ಖರ್ಜೂರ ಸೇವಿಸುವುದರಿಂದ ಏನೇನು ಪ್ರಯೋಜನಗಳಿವೆ ಎಂದು ಗೊತ್ತಾ?

Webdunia
ಸೋಮವಾರ, 24 ಸೆಪ್ಟಂಬರ್ 2018 (16:00 IST)
ಖರ್ಜೂರವನ್ನು ಸೇವಿಸಲು ಇಂತಹುದೇ ಸಮಯ ಎಂದೇನಿಲ್ಲ. ಯಾವುದೇ ಸಮಯದಲ್ಲಿ ಯಾವ ವಯಸ್ಸಿನವರೂ ಸಹ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಖರ್ಜೂರದ ತಿನಿಸುಗಳು ಸಿಹಿಯೇ ಆಗಿರಲಿ ಅಥವಾ ಒಣಗಿರುವ ಖರ್ಜೂರವೇ ಆಗಿರಲಿ ಖರ್ಜೂರವಂತೂ ಎಲ್ಲರಿಗೂ ಅಚ್ಚುಮೆಚ್ಚು. ಇದನ್ನು ದಿನನಿತ್ಯ ಒಂದು ಖರ್ಜೂರವನ್ನಾದರೂ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 
* ಹೃದ್ರೋಗ ಸಮಸ್ಯೆಯನ್ನು ಕಡಿಮೆ ಮಾಡಲು ಖರ್ಜೂರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ಜ್ಯೂಸ್ ರೀತಿಯಲ್ಲಿ ಕುಡಿದರೆ ಸಮಸ್ಯೆಯು ನಿವಾರಣೆಯಾಗುತ್ತದೆ.
 
* ಗರ್ಭಿಣಿಯರಲ್ಲಿ ಹಿಮೊಗ್ಲೋಬಿನ್ ಅಂಶ ಕಡಿಮೆ ಆಗಿದ್ದರೆ ಖರ್ಜೂರವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ಆರೋಗ್ಯ ವೃದ್ಧಿಸುವುದಲ್ಲದೇ ಭ್ರೂಣದ ಬೆಳವಣಿಗೆಗೂ ಸಹಕಾರಿಯಾಗಿದೆ. ಅಷ್ಟೇ ಅಲ್ಲದೇ ಹೆರಿಗೆಯ ನಂತರ ಎದೆಹಾಲಿನ ಉತ್ಪತ್ತಿಯಲ್ಲಿಯೂ ಖರ್ಜೂರದ ಪಾತ್ರ ಮಹತ್ವವಾದದ್ದು.
 
* ಖರ್ಜೂರವನ್ನು ಹಾಲಿನೊಂದಿಗೆ ರಾತ್ರಿ ಪೂರ್ತಿ ನೆನೆಸಿ ಮರುದಿನ ಜೇನು ಮತ್ತು ಏಲಕ್ಕಿ ಹುಡಿ ಸೇರಿಸಿ ಸೇವಿಸುವುದರಿಂದ ಶಕ್ತಿಯು ವರ್ಧಿಸುತ್ತದೆ.
 
* ಖರ್ಜೂರದಲ್ಲಿ ಪ್ರೋಟೀನ್ ಅಂಶವಿರುವುದರಿಂದ ದಂತಕ್ಷಯವನ್ನು ಅದು ತಡೆಯುತ್ತದೆ.
 
* ಖರ್ಜೂರದ ಸೇವನೆಯಿಂದ ಆರೋಗ್ಯಕರ ತೂಕವನ್ನು ಪಡೆದುಕೊಳ್ಳಬಹುದು.
 
* ಖರ್ಜೂರದಲ್ಲಿ ವಿಟಾಮಿನ್ ಎ ಇರುವುದರಿಂದ ಇರುಳುಕುರುಡು ಸಮಸ್ಯೆಯು ನಿವಾರಣೆಯಾಗುತ್ತದೆ.
 
* ಪೊಟ್ಯಾಶಿಯಂ ಅಧಿಕವಾಗಿ ಮತ್ತು ಸೋಡಿಯಂ ಇಳಿಕೆಯಾಗಿರುವ ಖರ್ಜೂರವು ಆರೋಗ್ಯಕರ ನರಮಂಡಲ ವ್ಯವಸ್ಥೆಗೆ ಕಾರಣವಾಗಿದೆ. 
 
* ಖರ್ಜೂರವು ಪ್ರೋಟೀನ್, ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಾಮಿನ್ ಬಿ1, ಬಿ2, ಬಿ3 ಹಾಗೂ ಬಿ5 ಅಲ್ಲದೇ ವಿಟಾಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ
 
* ಮೂಳೆಗಳ ಸಮರ್ಪಕವಾದ ಬೆಳವಣಿಗೆಗಾಗಿ ಮೆಗ್ನಿಷಿಯಂ ಹಾಗೂ ಕ್ಯಾಲ್ಸಿಯಂಗಳೆರಡೂ ಖರ್ಜೂರದಲ್ಲಿ ಹೇರಳವಾಗಿವೆ.
 
* ಖರ್ಜೂರದಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುತ್ತದೆ.
 
* ಖರ್ಜೂರವನ್ನು ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದು.
 
* ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆ ಮಾಡಲು ಖರ್ಜೂರ ಸಹಾಯ ಮಾಡುತ್ತದೆ
 
* ಖರ್ಜೂರ ಹಾಕಿ ಕಾಯಿಸಿದ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.
 
* ಕರಗುವ ಮತ್ತು ಕರಗದ ಫೈಬರ್‌ಗಳು ಹಾಗೂ ವಿವಿಧ ಪ್ರಕಾರದ ಅಮೀನೊ ಆಸಿಡ್ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಜೀರ್ಣಿಸಲು ಖರ್ಜೂರ ಸಹಾಯ ಮಾಡುತ್ತದೆ.
 
* ನೈಸರ್ಗಿಕ ಸಕ್ಕರೆಯಾದ ಗ್ಲುಕೊಸ್ ಮತ್ತು ಫ್ರುಕೋಸ್ ಅನ್ನು ಖರ್ಜೂರವು ಒಳಗೊಂಡಿರುವುದರಿಂದ ಶಕ್ತಿವರ್ಧಕ ಡ್ರೈಫ್ರುಟ್ ಇದಾಗಿದೆ. 
 
* ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿಯೂ ಖರ್ಜೂರದ ಪಾತ್ರ ಮಹತ್ವದ್ದಾಗಿದೆ.
 
* ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ