ಕಪ್ಪಾದ ಬೆಳ್ಳಿಯ ವಸ್ತುಗಳನ್ನು ಹೊಳೆಯುವಂತೆ ಮಾಡಲು ಹೀಗೆ ಮಾಡಿ

ಗುರುವಾರ, 17 ಅಕ್ಟೋಬರ್ 2019 (10:16 IST)
ಬೆಂಗಳೂರು : ಬೆಳ್ಳಿ ವಸ್ತುಗಳು ಹೊಸದಾಗಿ ಖರೀದಿಸಿದಾಗ ಪಳಪಳ ಅಂತ ಹೊಳೆಯುತ್ತಿರುತ್ತದೆ. ಆದರೆ ಆಮೇಲೆ ಅದು ಕಪ್ಪಾಗುತ್ತದೆ. ಅಂತಹ ಬೆಳ್ಳಿ ವಸ್ತುಗಳನ್ನು  ಈ ರೀತಿ  ಸ್ವಚ್ಚ ಮಾಡುವುದರಿಂದ ಅದು ಮತ್ತೆ ಹೊಳಯುವಂತೆ ಮಾಡಬಹುದು.
*ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಯಾಗಲು ಬಿಡಿ. ಬಳಿಕ ಅದಕ್ಕೆ ತಿಂಡಿಗಳನ್ನು ಪ್ಯಾಕ್ ಮಾಡಲು ಬಳಸುವ ಅಲ್ಯುಮಿನಿಯಂ ಶೀಟ್ ಗಳನ್ನು ಉಂಡೆ ಮಾಡಿ ಅದಕ್ಕೆ ಹಾಕಿ ಅದು ಕುದಿಯುತ್ತಿರುವಾಗ ಅದಕ್ಕೆ ಬೆಳ್ಳಿ ವಸ್ತುಗಳನ್ನು ಹಾಕಿ 15 ನಿಮಿಷ ಕುದಿಸಿ. ನಂತರ ತೆಗೆದು ಸ್ವಚ್ಚವಾದ ನೀರಿನಲ್ಲಿ ತೊಳೆಯಿರಿ. ಆಗ ವ್ಯತ್ಯಾಸ ನೋಡಿ.


* ಕಪ್ಪಾದ ಬೆಳ್ಳಿಯ ವಸ್ತುಗಳಿಗೆ ಟೂತ್ ಪೇಸ್ಟ್ ನ್ನು ಹಚ್ಚಿ ಬ್ರೆಶ್ ನಿಂದ ತೊಳೆಯುವುದರಿಂದಲೂ ಕೂಡ ಬೆಳ್ಳಿ ವಸ್ತುಗಳು ಪಳಪಳ ಹೊಳೆಯತ್ತವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೇಸಿಗೆಕಾಲದಲ್ಲಿ ಕೂದಲು ಒರಟಾಗುವುದನ್ನು ತಡೆಯಲು ಇದನ್ನು ಹಚ್ಚಿ