Select Your Language

Notifications

webdunia
webdunia
webdunia
webdunia

ಚಾಕೊಲೇಟ್ ಖರೀದಿ ಮಾಡುವಾಗ ಈ ಅಂಶಗಳನ್ನು ಗಮನಿಸ್ತಿರಾ?

ಚಾಕೊಲೇಟ್ ಖರೀದಿ ಮಾಡುವಾಗ ಈ ಅಂಶಗಳನ್ನು ಗಮನಿಸ್ತಿರಾ?
ಬೆಂಗಳೂರು , ಸೋಮವಾರ, 13 ಸೆಪ್ಟಂಬರ್ 2021 (07:53 IST)
Life Hacks : ನಮ್ಮಲ್ಲಿ ಹೆಚ್ಚಿನವರು ನಮ್ಮ ನೆಚ್ಚಿನ ಚಾಕೊಲೇಟ್ ಗೆ ಯಾವ ಪದಾರ್ಥಗಳನ್ನು ಹಾಕಿದ್ದಾರೆ, ಗುಣಮಟ್ಟದ್ದಾ ಇಲ್ಲವೋ ಏನನ್ನೂ ನೋಡದೆ ಖರೀದಿಸುತ್ತಾರೆ.

ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಹ ಬಹಳ ಇಷ್ಟ. ಇದರ ರುಚಿ ಎಲ್ಲರನ್ನು ಸೆಳೆಯದೇ ಬಿಡುವುದಿಲ್ಲ. ನೀವು ಡಾರ್ಕ್ ಚಾಕೊಲೇಟ್ ಅಥವಾ ಹಾಲಿನ ಚಾಕೊಲೇಟ್ಗಳನ್ನು ಅಥವಾ ಡ್ರೈ ಫ್ರೂಟ್ ಚಾಕೊಲೇಟ್  ಯಾವುದೇ ಇರಲಿ ಅದು ನಿಮ್ಮಲ್ಲಿ ಹೆಚ್ಚು ಸಂತೋಷಕ್ಕೆ ಕಾರಣವಾಗುತ್ತದೆ. ನೀವು ಬೇಸರದಿಂದ ಇದ್ದಲ್ಲಿ , ಒಂದು ಚಾಕೊಲೇಟ್ ಬೇಟ್ ನಿಮ್ಮ ಬೇಸರವನ್ನು ದೂರ ಮಾಡುತ್ತದೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ನೆಚ್ಚಿನ ಚಾಕೊಲೇಟ್ ಗೆ ಯಾವ ಪದಾರ್ಥಗಳನ್ನು ಹಾಕಿದ್ದಾರೆ, ಗುಣಮಟ್ಟದ್ದಾ ಇಲ್ಲವೋ ಏನನ್ನೂ ನೋಡದೆ ಖರೀದಿಸುತ್ತಾರೆ.
ನಿಮ್ಮ ನೆಚ್ಚಿನ ಚಾಕೊಲೇಟ್ ಖರೀದಿಸುವ ಮುನ್ನ ನೆನಪಿನಲ್ಲಿಡಬೇಕಾದ ಕೆಲವು ಅಂಶಗಳು ಇಲ್ಲಿದೆ.
ಕೋಕೋ ಬಟರ್ ಚಾಕೊಲೇಟ್’ಗಳು ಹೆಚ್ಚು ರುಚಿಕರವಾಗಿತ್ತವೆ ಎಂದು ಬಹಳಷ್ಟು ಜನರು ಇಷ್ಟಪಡುತ್ತಾರೆ.  ಆದರೆ ನೀವು ಹೆಚ್ಚು ದಿನ ಬಾಳಿಕೆ ಬರುವ ಚಾಕೊಲೇಟ್ ಹುಡುಕುತ್ತಿದ್ದರೆ, ನೀವು ಕೋಕೊ ಬಟರ್ ಚಾಕೊಲೇಟ್ಗಳನ್ನು ಖರೀದಿ ಮಾಡುವುದು ಬೇಡ.  ಇದು ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ.
ಹೊರಗಡೆಯಿಂದ ಪ್ಯಾಕ್ ನೋಡಿ ಹಾಗೆಯೇ ತೆಗೆದುಕೊಳ್ಳಬೇಡಿ. ಸರಿಯಾದ ತಾಪಮಾನದಲ್ಲಿ ಸಂಗ್ರಹ ಮಾಡದಿದ್ದರೆ, ಚಾಕೊಲೇಟ್ ಹಾಳಾಗುತ್ತದೆ. ಹಾಗಾಗಿ ಸ್ಮೂಥ್ ಕವರ್ನಲ್ಲಿ ಪ್ಯಾಕ್ ಮಾಡಿರುವ ಚಾಕೊಲೇಟ್ ಖರೀದಿ ಮಾಡಬೇಡಿ. ಇದು ಚಾಕೊಲೇಟ್ ಹಳೆಯದ ಅಥವಾ ಹೊಸಾದ ಎಂಬುದನ್ನ ತಿಳಿಸುತ್ತದೆ.
webdunia

ಚಾಕೊಲೇಟ್ ಮಾತ್ರವಲ್ಲ, ಯಾವುದೇ ಪದಾರ್ಥಗಳನ್ನು ಖರೀದಿಸುವ ಮೊದಲು ಎಕ್ಸ್ ಪೈರಿ ದಿನಾಂಕ ಗಮನಿಸುವುದು ಉತ್ತಮವಾದ ಅಭ್ಯಾಸ. ಅದರಲ್ಲೂ ಚಾಕೊಲೇಟ್’ನಂತಹ ಪದಾರ್ಥಗಳು ಬೇಗನೆ ಹಾಳಾಗುವುದರಿಂದ ನೀವು ಯಾವಾಗಲೂ ಎಕ್ಸ್ ಪೈರಿ ದಿನಾಂಕಗಳನ್ನು ಪರಿಶೀಲಿಸಿ ಖರೀದಿ ಮಾಡಿ. ಅಲ್ಲದೇ ಅದನ್ನು ಖರೀದಿ ಮಾಡಿದ ಮೇಲೆ ಬೇಗನೆ ಸೇವನೆ ಮಾಡುವುದು ಉತ್ತಮ, ಅದನ್ನು ಡೇಟ್ ಬಾರ್ ಆಗುವ ತನಕ ಬಿಡಬಾರದು.
ಚಾಕೊಲೇಟ್ ಸಾಮಾನ್ಯವಾಗಿ ಎರಡು ವಿಧದ ಎಮಲ್ಸಿಫೈಯರ್ ಹೊಂದಿರುತ್ತದೆ. ಒಂದು ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್, ಇನ್ನೊಂದು ಪಾಲಿಸೋರ್ಬೇಟ್ -80. ಇದು ಕರುಳಿನ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು. ಒಂದು ಅಧ್ಯಯನದ ಪ್ರಕಾರ, ಈ  ಅಂಶಗಳು ಉರಿಯೂತದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಸಾಬೀತಾಗಿದೆ. ಆದ್ದರಿಂದ, ನೀವು ಎಮಲ್ಸಿಫೈಯರ್ ಚಾಕೊಲೇಟ್ಗಳನ್ನು ಖರೀದಿ ಮಾಡುವುದನ್ನ ಕಡಿಮೆ ಮಾಡಿ.
ಕೆಲವರಿಗೆ ಚಾಕೊಲೇಟ್ ವಿಚಾರದಲ್ಲಿ ಅದೇ ಬೇಕು,ಇದು ಬೇಕು ಎಂಬುದಿಲ್ಲ. ಎಲ್ಲಾ ಚಾಕೊಲೇಟ್’ಗಳು ಇಷ್ಟ. ಇನ್ನು ಕೆಲವರು ರುಚಿ ನೋಡಿ ಚಾಕೊಲೇಟ್ ಆಯ್ಕೆ ಮಾಡಿದರೆ ಮತ್ತೆ ಕೆಲವರು ಬಣ್ಣದ ಆಧಾರದ ಮೇಲೆ ಚಾಕೊಲೇಟ್ ತಿನ್ನುತ್ತಾರೆ.  ಕೆಲವರಿಗೆ ಬಿಳಿ ಚಾಕೊಲೇಟ್’ಗಳು ಬಹಳ ಇಷ್ಟವಾಗುತ್ತವೆ. ಆದರೆ ಈ ಬಿಳಿ ಚಾಕೊಲೇಟ್’ಗಳು ಆರೋಗ್ಯಕ್ಕೆ ಹಾನಿಕಾರಕ. ಈ  ಬಿಳಿ ಚಾಕೊಲೇಟ್’ಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ ಹಾಗಾಗಿ ಸೇವನೆ ಮಾಡುವ ಮುನ್ನ ಎಚ್ಚರಿಕೆ.
ಇನ್ನು ಖರೀದಿ ಮಾಡಿದ ಚಾಕೊಲೇಟ್ ಸ್ಟೋರ್ ಮಾಡಲು ಕೆಲ ಸಲಹೆಗಳು
ರೆಫ್ರಿಜರೇಟರ್ನಲ್ಲಿಡಬೇಡಿ  ಚಾಕೊಲೇಟ್ ರೆಫ್ರಿಜರೇಟರ್ನಲ್ಲಿರುವ ಯಾವುದೇ ವಾಸನೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಇದು ಚಾಕೊಲೆಟ್ನಲ್ಲಿರುವ ಸಿಹಿಯ ಅಂಶ ಮೇಲೆ ಬರಲು ಕಾರಣವಾಗಿ, ರುಚಿಯನ್ನು ಹಾಳು ಮಾಡುತ್ತದೆ.  ಹಾಗಾಗಿ ಇದನ್ನು ತಂಪಾದ ಒಣಗಿದ ಜಾಗದಲ್ಲಿ ಇಡಬೇಕು. ಕೇವಲ ಸೂರ್ಯನ ಬೆಳಕು ಮಾತ್ರವಲ್ಲದೇ, ಮನೆಯಲ್ಲಿರುವ ಲೈಟ್ಗಳು ಸಹ ಚಾಕೊಲೇಟ್ ಮೇಲೆ ಬೀಳದಂತೆ ಸಂಗ್ರಹ ಮಾಡಬೇಕು. ಆರು ತಿಂಗಳಿಂದ ಒಂದು ವರ್ಷದವರೆಗೆ ಚಾಕೊಲೇಟ್ ಸಂಗ್ರಹಿಸಿಡಬೇಕು  ಎಂದರೆ ರೆಫ್ರಿಜರೇಟರ್ ಬಳಕೆ ಮಾಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸಣ್ಣ ನೆಲ್ಲಿಕಾಯಿಯಲ್ಲಿದೆ ದೊಡ್ಡ ಪ್ರಯೋಜನ