Select Your Language

Notifications

webdunia
webdunia
webdunia
webdunia

ಮಧುಮೇಹಿಗಳಿಗಾಗಿ ಈ ಹಣ್ಣುಗಳು

ಮಧುಮೇಹಿಗಳಿಗಾಗಿ ಈ ಹಣ್ಣುಗಳು
Bangalore , ಭಾನುವಾರ, 30 ಜುಲೈ 2017 (08:32 IST)
ಬೆಂಗಳೂರು: ಮಧುಮೇಹವಿದ್ದರೂ ಯಾವ ಹಣ್ಣು ತೆಗೆದುಕೊಳ್ಳಲೂ ಹಿಂಜರಿಯುತ್ತಾರೆ. ಹಾಗಿರುವಾಗ ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳು ಯಾವುವು ಗೊತ್ತಾ?


ದಾಳಿಂಬೆ
ದಾಳಿಂಬೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಕೊಡುವ ಹಣ್ಣು.  ಇದು ಹಲವು ಮಾರಣಾಂತಿಕ ರೋಗಿಗಳು ತಿನ್ನಬಹುದಾದ ಹಣ್ಣು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಪ್ರಮಾಣದಲ್ಲಿದೆ.

ಸ್ಟ್ರಾಬೆರಿ
ಸ್ಟ್ರಾಬೆರಿ ಕೊಂಚ ದುಬಾರಿಯೆನಿಸಿದರೂ ಇದರಲ್ಲಿರುವ ಫೈಬರ್, ಮಾಂಗನೀಸ್ ವಿಟಮಿನ್ ಸಿ ಅಂಶ ಆರೋಗ್ಯಕ್ಕೆ ಉತ್ತಮ. ಇದು ರೋಗ  ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ರಕ್ತದಲ್ಲಿ ಸಕ್ಕರೆ ಅಂಶ ಹದವಾಗಿರುವಂತೆ ನೋಡಿಕೊಳ್ಳುತ್ತದೆ.

ಆಪಲ್
ಆಪಲ್ ದಿನಕ್ಕೊಂದು ಸೇವಿಸುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ.ಇದರಲ್ಲಿ ಆಂಟಿ ಆಕ್ಸಿಡೆಂಟ್, ಫೈಬರ್ ಸಾಕಷ್ಟು ಪ್ರಮಾಣದಲ್ಲಿದ್ದು, ಮಧುಮೇಹದ ವಿರುದ್ಧ ಹೋರಾಡುತ್ತದೆ.

ಕಲ್ಲಂಗಡಿಹಣ್ಣು
ಬಹಳ ಮಂದಿಗೆ ಮಧುಮೇಹಿಗಳು ಕಲ್ಲಂಗಡಿ ಹಣ್ಣು ಸೇವಿಸಬಾರದು ಎಂಬ ತಪ್ಪು ಕಲ್ಪನೆಯಿದೆ. ಇದರಲ್ಲಿ ಸಕ್ಕರೆ ಅಂಶ ಸಮಪ್ರಮಾಣದಲ್ಲಿದೆ. ಅಲ್ಲದೆ ದೇಹಕ್ಕೆ ಸಾಕಷ್ಟು ದ್ರವಾಂಶ ಒದಗಿಸುತ್ತದೆ. ಇದರಲ್ಲಿರುವ ಫೈಬರ್, ಮಿನರಲ್ಸ್ ದೇಹಕ್ಕೆ ಅತ್ಯುತ್ತಮ ಪೌಷ್ಠಿಕತೆ ಒದಗಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಡಿಮೆ ನಿದ್ದೆ ಮಾಡ್ತೀರಾ..? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು..!