Select Your Language

Notifications

webdunia
webdunia
webdunia
webdunia

ಮಧುಮೇಹ ಆಯಸ್ಸನ್ನು ಹತ್ತು ವರ್ಷ ಕಡಿಮೆ ಮಾಡುತ್ತಂತೆ!

ಮಧುಮೇಹ ಆಯಸ್ಸನ್ನು ಹತ್ತು ವರ್ಷ ಕಡಿಮೆ ಮಾಡುತ್ತಂತೆ!
Bangalore , ಬುಧವಾರ, 18 ಜನವರಿ 2017 (11:53 IST)
ಬೆಂಗಳೂರು: ಇತ್ತೀಚೆಗೆ ಸಕ್ಕರೆ ಖಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಮಧುಮೇಹ ಬಂದು ಸಿಹಿ ತಿನಿಸು ತಿನ್ನದ ಹಾಗೆ ಆಗುವುದು ಮಾತ್ರವಲ್ಲ. ಇದರಿಂದ ನಮ್ಮ ಆಯಸ್ಸು ಹತ್ತು ವರ್ಷದಷ್ಟು ಕಡಿಮೆಯಾಗುತ್ತದಂತೆ.

ಆಕ್ಸ್ ಫರ್ಡ್ ವಿವಿಯ ಹೊಸ ಸಂಶೋಧನೆ ಇಂತಹದ್ದೊಂದು ಸತ್ಯ ಕಂಡುಕೊಂಡಿದೆ. ಮಧ್ಯ ವಯಸ್ಸಿನಲ್ಲಿ ಮಧುಮೇಹ ಬಂದರೆ ಆಯಸ್ಸು 10 ವರ್ಷಗಳಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಬೊಜ್ಜಿಗೆ ಸಂಬಂಧಿಸಿದ ಟೈಪ್ ಹಂತದ ಮಧುಮೇಹ ಹೃದಯದ ಖಾಯಿಲೆ ಮತ್ತು ಪಾರ್ಶ್ವ ವಾಯುವಿಗೆ ನೇರ ಸಂಪರ್ಕವಿದೆ. ಇದರಿಂದಾಗಿ ಇಂತಹ ಮಧುಮೇಹಿಗಳ ಆಯಸ್ಸೂ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.  50 ವರ್ಷ ಪ್ರಾಯದಲ್ಲಿ ಮಧುಮೇಹ ಬಂತೆಂದರೆ ಮುಂದಿನ 25 ವರ್ಷಗಳೊಳಗೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಕಾರರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಬ್ಬು ರೊಟ್ಟಿ ಜತೆ ತಿನ್ನಲು ಖಡಕ್ ಬಸಳೆ ಸೊಪ್ಪಿನ ಸಾಂಬಾರ್