Select Your Language

Notifications

webdunia
webdunia
webdunia
webdunia

ಮದುವೆಗೂ ಮೊದಲೇ ಮೂರು ಸಲ ಗರ್ಭಪಾತ ಮಾಡಿಸಿಕೊಳ್ಳೋದಾ

ಮದುವೆಗೂ ಮೊದಲೇ ಮೂರು ಸಲ ಗರ್ಭಪಾತ ಮಾಡಿಸಿಕೊಳ್ಳೋದಾ
ಬೆಂಗಳೂರು , ಶನಿವಾರ, 21 ಮಾರ್ಚ್ 2020 (14:25 IST)
ಪ್ರಶ್ನೆ: ನನ್ನ ಪ್ರಿಯತಮ ನಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ.
ಆದರೆ ನನ್ನ ಸಮಸ್ಯೆ ಏನೆಂದರೆ, ಆತನಿಗೆ ಈಗ ವಿಚಿತ್ರ ರೋಗಗಳ ಲಕ್ಷಣಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಆತನೊಂದಿಗೆ ಸಂಭೋಗ ಮಾಡಬಹುದೇ? ದಯವಿಟ್ಟು ತಿಳಿಸಿ.

ಉತ್ತರ: ಕಾಮಾ ತುರಾನಂ ನ ಭಯಂ ನ ಲಜ್ಜಾ ಎನ್ನುವ ಮಾತಿದೆ. ಪುರುಷ ಹಾಗೂ ಸ್ತ್ರೀಯರು ಲೈಂಗಿಕ ಆಕರ್ಷಣೆಗೆ ಒಳಗಾದಾಗ ಯಾವುದನ್ನೂ ಲೆಕ್ಕಿಸುವುದಿಲ್ಲ. ಇನ್ನು ಪ್ರೀತಿ, ಪ್ರೇಮದಲ್ಲಿ ಬಿದ್ದಾಗ ಅವರ ಪ್ರಿಯತಮ, ಪ್ರೇಯಸಿಯೇ ಅವರಿಗೆ ಸರ್ವಸ್ವ ಆಗಿರುತ್ತಾರೆ. ಆದರೆ ಸರ್ವಸ್ವ ಎನ್ನುತ್ತಿದ್ದವರೇ ನರಕಕ್ಕೆ ದಾರಿ ತೋರಬಲ್ಲರು.

ನೀವು ನಿಮ್ಮ ಪ್ರೀತಿ ವಿಷಯವನ್ನು ಮಾತ್ರ ಹೇಳಿದ್ದೀರಿ. ಆದರೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಮದುವೆಯಾಗದೇ ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿರೋದು ಸರಿಯಲ್ಲ. ನೀವು ಆತನೊಂದಿಗೆ ಮದುವೆಗೂ ಮುಂಚೆ ಸಂಬಂಧ ಬೆಳೆಸಿದ್ದು ಸರಿಯಲ್ಲ. ಆದರೂ ಈಗ ಆತನಿಗೆ ವಿಚಿತ್ರ ರೋಗಗಳಿವೆ ಎಂದಿದ್ದೀರಿ. ನಿಮ್ಮ ಪ್ರಿಯಕರನಿಗೆ ರೋಗಗಳು ಇದ್ದರೆ ಆತನಿಂದ ನೀವು ಲೈಂಗಿಕವಾಗಿ ದೂರ ಉಳಿಯುವುದೇ ಕ್ಷೇಮ. ಏಕೆಂದರೆ ರಕ್ತಪಿತ್ತ ರೋಗಿಯಾದ ಪುರುಷರೊಡನೆ ಸ್ತ್ರೀಯರು ಸೇರಬಾರದು ಎಂದು ಹಿರಿಯರೇ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸದಾ ಹಾಸಿಗೆ ಸುಖದ್ದೇ ಚಿಂತೆ