Daily Horoscope
✕

ಪ್ರಿಯತಮೆಯ ಸ್ನೇಹಿತೆಯ ಮೇಲೆ ಕಣ್ಣು ಹಾಕಿದ ಪ್ರಿಯಕರ

Webdunia
ಮಂಗಳವಾರ, 25 ಫೆಬ್ರವರಿ 2020 (20:28 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಉತ್ತಮ ಉದ್ಯೋಗದಲ್ಲಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ನಾನು ಒಬ್ಬಳ ಜತೆ ಪ್ರೇಮದಲ್ಲಿ ಸಿಲುಕಿರುವೆ. ನಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಆದರೆ ಕೆಲವು ತಿಂಗಳ ಹಿಂದೆ ಅವಳು ತನ್ನ ಗೆಳತಿಯನ್ನು ನನಗೆ ಪರಿಚಯ ಮಾಡಿಸಿದಳು. ಆಕೆ ನನ್ನ ಪ್ರೇಯಸಿಗಿಂತ ಚೆಲುವೆ.

 

ನನ್ನ ಪ್ರೇಯಸಿ ಗೆ ತಿಳಿಯದಂತೆ ಆಕೆಯ ಗೆಳತಿ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಅಲ್ಲದೇ ನಾವಿಬ್ಬರೂ ಡೇಟಿಂಗ್ ಕೂಡ ನಡೆಸಿದ್ದೇವೆ. ನನ್ನ ಸಮಸ್ಯೆ ಏನೆಂದರೆ ನನ್ನ ಪ್ರೇಯಸಿಯನ್ನು  ಮದುವೆಯಾಗಬೇಕೋ ಅಥವಾ ಅವಳ ಗೆಳತಿಯನ್ನೋ ಎನ್ನುವ ಗೊಂದಲಕ್ಕೆ ಒಳಗಾಗಿರುವೆ. ಪರಿಹಾರ ತಿಳಿಸಿರಿ.

ಉತ್ತರ: ಹೆಣ್ಣು ಒಬ್ಬನನ್ನೇ ಪ್ರೀತಿಸಿ ಮದುವೆಯಾಗುವ ಸಾವಿರಾರು ಕನಸು ಕಂಡಿರುತ್ತಾಳೆ. ನಿಮ್ಮ ಹುಡುಗಿ ಸಹ ನಿಮ್ಮ ಬಗ್ಗೆ ಬೆಟ್ಟದಷ್ಟು ಆಸೆ, ಪ್ರೀತಿ ಇಟ್ಟುಕೊಂಡಿದ್ದಾಳೆ. ಆದರೆ ನೀವು ಆಕೆಗೆ ಗೊತ್ತಾಗದಂತೆ ಆಕೆಯ ಗೆಳತಿಯನ್ನೂ ಪ್ರೀತಿಸಲು ಶುರು ಮಾಡಿದ್ದೀರಿ. ಇದರ ಅರ್ಥ ನೀವು ಪ್ರೇಯಸಿ ಇಲ್ಲವೇ ಆಕೆಯ ಗೆಳತಿಯ ಬಾಹ್ಯರೂಪಕ್ಕೆ ಮಾತ್ರ ಬೆಲೆ ಕೊಡುತ್ತಿದ್ದೀರಿ.

ನಿಮ್ಮದು ಪ್ರೀತಿ ಅಲ್ಲ. ಕೇವಲ ಆಕರ್ಷಣೆ ಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಿಮ್ಮ ಮನಸ್ಸಿನಿಂದ ಹಾಗೂ ನಿಷ್ಕಲ್ಮಶ ಪ್ರೀತಿಯಿಂದ ಯೋಚನೆ ಮಾಡಿ ಒಂದು ಸೂಕ್ತ ನಿರ್ಧಾರಕ್ಕೆ ಬನ್ನಿ. ಮೋಹದ ಬಲೆಯಲ್ಲಿ ಪ್ರೀತಿಗೆ ಅಪಮಾನ ಮಾಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ
Show comments