Publish Date: Thu, 26 Dec 2019 (15:33 IST)
Updated Date: Thu, 26 Dec 2019 (15:35 IST)
ಪ್ರಶ್ನೆ: ನನ್ ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಮೂರು ವರ್ಷ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಅವನು ಬೇರೆ ಹುಡುಗಿಯನ್ನು ಮದುವೆಯಾದ. ಆ ಬಳಿಕ ನಾನು ಮತ್ತೊಬ್ಬ ಹುಡುಗನನ್ನು ಪ್ರೀತಿ ಮಾಡಿದೆ. ಇವನೊಂದಿಗೆ ಎರಡು ವರ್ಷ ಸಂಭೋಗ ಮಾಡಿದೆ. ಅವನೂ ಬೇರೆ ಹುಡುಗಿಯನ್ನು ಓಡಿಸಿಕೊಂಡು ಹೋದ.
ಮೂರನೇ ಹುಡುಗನು ವರ್ಷದವರೆಗೆ ನನ್ನನ್ನು ಚೆನ್ನಾಗಿ ಅನುಭವಿಸಿ ಕೈ ಕೊಟ್ಟ. ಈಗ ನಾಲ್ಕನೇ ಹುಡುಗ ನನ್ನ ಪ್ರೀತಿ ಮಾಡೋದಾಗಿ ಹೇಳ್ತಿದ್ದಾನೆ. ನಾನು ಯಾರ ಜೊತೆ ಮಲಗಿದ್ದರೂ ನಿರೋಧ್ ಬಳಸುವಂತೆ ಹೇಳಿಲ್ಲ. ಈಗ ನಾನೇನು ಮಾಡಲಿ?
ಉತ್ತರ: ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ. ಮಾನಸಿಕ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.
ಒಂದು, ಎರಡು, ಮೂರು ಅಂತ ನಿಮಗೆ ಹತ್ತಿರವಾದ ಹುಡುಗರಿಗೆ ನೀವು ಮೈಯನ್ನು ದಾನವಾಗಿ ನೀಡಿದ್ದು ತಪ್ಪು. ಈಗಲಾದರೂ ಎಚ್ಚೆತ್ತುಕೊಂಡು ಮದುವೆ ಮೊದಲು ಮಾಡಿಕೊಳ್ಳಿ. ಆ ಬಳಿಕವೇ ಮುಂದಿನ ಕೆಲಸಕ್ಕೆ ಮುಂದಾಗಿ.