Select Your Language

Notifications

webdunia
webdunia
webdunia
webdunia

ಗರ್ಭ ಧರಿಸಿದಾಗ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾ?

ಗರ್ಭ ಧರಿಸಿದಾಗ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾ?
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (13:25 IST)
ಸಮಸ್ಯೆಸರ್ ಮದುವೆ ಆಗಿ 3 ವರ್ಷಗಳು ಆಗಿವೆ. ನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ ನಾಲ್ಕು ತಿಂಗಳು ತುಂಬುತ್ತಿದೆನನ್ನ ಮಡದಿ ಗರ್ಭವತಿಯಾದಂದಿನಿಂದ ನನ್ನ ಪತ್ನಿ ಜೊತೆ ಸಂಭೋಗ ನಡೆಸಿಲ್ಲನಾನು ಹಾಗೂ ಪತ್ನಿ ಬೇರೆ ಬೇರೆ ಮಲಗಬೇಕೆಂದು ಕೆಲವರು ಹೇಳುತ್ತಿದ್ದಾರೆ

ಆದರೂ ನನ್ನ ಪತ್ನಿಗೆ ಕೂಡಿ ಮಲಗೋದ್ರಲ್ಲಿ ಆಸಕ್ತಿಯಿದೆಆದರೆ ನನ್ನಾಕೆಗೆ ಏನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆಕೆಯ ಜೊತೆ ಅದನ್ನ ನಡೆಸುತ್ತಿಲ್ಲಆಕೆ ನನ್ನ ಬಳಿ ಅದಕ್ಕೆ ಅಪೇಕ್ಷಿಸುತ್ತಾಳೆಗರ್ಭಿಣಿ ಹೆಂಡತಿ ಜೊತೆಗೆ ಸರಸ ಎಷ್ಟು ಸೂಕ್ತ?

ಸಲಹೆ:  ಹೆಣ್ಣು ಗರ್ಭವತಿ ಆಗಿದ್ದರೂ ಕೂಡಾ ಲೈಂಗಿಕ ಸಂತೋಷವನ್ನು ಗಳಿಸುತ್ತಿರುತ್ತಾಳೆ ಮತ್ತು ಲೈಂಗಿಕ ಸಂತೋಷವನ್ನು ಗಂಡನಿಗೂ ನೀಡುತ್ತಿರುತ್ತಾಳೆಮಡದಿ ಗರ್ಭಿಣಿಯಾದ ಒಂದರಿಂದ ಮೂರು ತಿಂಗಳ ತನಕ ಅದನ್ನ ನಡೆಸಬಾರದುಹಾಗೂ ಗರ್ಭಿಣಿಗೆ ಏಳು ತಿಂಗಳ ನಂತರ ಸಂಭೋಗ ನಡೆಸಬಾರದು

ಇದರಿಂದ ಪಿಂಡಗೂಸಿಗೆ ತೊಂದರೆ ಅಥವಾ ಆಕೆಗೆ ಗರ್ಭಪಾತವಾಗುವ ಸಂಭವವಿದೆನಾಲ್ಕರಿಂದ ಏಳು ತಿಂಗಳ ಒಳಗೆ ಮಡದಿಯ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ರತಿಸುಖವನ್ನು ವೈದ್ಯರು ಸಲಹೆ ನೀಡಿದರೆ ಮಾತ್ರ ನಡೆಸಬಹುದುಆದರೆ ಎಚ್ಚರ ತುಂಬಾ ಮುಖ್ಯ

ಉದಾಹರಣೆಗೆ ನಿಂತ ಭಂಗಿಯಲ್ಲಿ ಆಕೆ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ಅದನ್ನ ನಡೆಸಬಹುದುಆಕೆಯ ಹೊಟ್ಟೆಯ ಮೇಲೆ ಭಾರ ಹಾಕಿದರೆ ಅಪಾಯ ಅನ್ನೋದನ್ನು ನೆನಪಿಡಿ.



 





Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರ ಹಿಂದೆ ಹಸ್ತಮೈಥುನ ಮಾಡಿಕೊಳ್ಳುವ ಭೂಪ