Webdunia - Bharat's app for daily news and videos

Install App

ಚಪ್ಪಾಳೆ ತಟ್ಟುವುದು ಆರೋಗ್ಯಕ್ಕೂ ಹಿತ

Webdunia
ಮಂಗಳವಾರ, 28 ಫೆಬ್ರವರಿ 2017 (12:10 IST)
ಇತರರನ್ನು ಶ್ಲಾಘಿಸಲು, ಅಭಿನಂದನೆ ಹೇಳಲು, ಹುರಿದುಂಬಿಸಲು, ಕಾರ್ಯಕ್ರಮಗಳಲ್ಲಿ ನೀವೆಲ್ಲ ಚಪ್ಪಾಳೆ ತಟ್ಟೇ ಇರುತ್ತೀರಾ. ಈಗಿಗಂತೂ ಹೇಳಿ ಚಪ್ಪಾಳೆ ತಟ್ಟಿಸಿಕೊಳ್ಳುವ ಕಾಲ ಬಂದು ಬಿಟ್ಟಿದೆ. ಎರಡು ಕೈ ಎತ್ತಿ ಚಪ್ಪಾಳೆ ಹೊಡೆಯದಿರುವಷ್ಟು ಸೋಮಾರಿತನ ಆವರಿಸಿಕೊಂಡಿದೆ ನಮ್ಮ ಜನರಲ್ಲಿ. ಆದರೆ ಈ ಚಪ್ಪಾಳೆ ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೇ?  ಇದು ತಮಾಷೆ ಅಲ್ಲ. 

ಹೌದು ಚಪ್ಪಾಳೆ ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ. ಇಲ್ಲಿದೆ ನೋಡಿ ಚಪ್ಪಾಳೆಯ 6 ಆರೋಗ್ಯ ಲಾಭಗಳು 
 
*   ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. 
 
*  ಜೀರ್ಣಾಂಗ ತೊಂದರೆಗಳನ್ನೆದುರಿಸುತ್ತಿರುವ ಜನರಿಗೆ ಪರಿಣಾಮಕಾರಿ ಪರಿಹಾರ.
 
* ಚಪ್ಪಾಳೆ, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
*ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಮತ್ತು ಕೂದಲು ನಷ್ಟದಂತಹ  ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಲಾಭಕರವಾಗಿರುತ್ತದೆ.
 
*ಚಪ್ಪಾಳೆ ಮಕ್ಕಳ ಮೋಟಾರ್ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ- ಅಚ್ಚುಕಟ್ಟಾದ ಕೈಬರಹ, ಕಡಿಮೆ ಕಾಗುಣಿತ ದೋಷ, ಇತ್ಯಾದಿ 
 
ಇತರರನ್ನು ಹುರಿದುಂಬಿಸುವ ಸಂಕೇತವಾಗಿ ತಟ್ಟುವ ಚಪ್ಪಾಳೆಯಿಂದ ನಿಮಗೆಷ್ಟು ಪ್ರಯೋಜನವೆಂದು ತಿಳಿಯಿತಲ್ಲ. ಇನ್ನು ಮುಂದೆ ಚಪ್ಪಾಳೆ ತಟ್ಟಲು ಸೋಮಾರಿತನ ತೋರಬೇಡಿ...ಚಪ್ಪಾಳೆ ತಟ್ಟಿ, ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಿರಿ.
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments