Webdunia - Bharat's app for daily news and videos

Install App

ದಾಹಕ್ಕೆ ಮ್ಯಾಂಗೋ ಚಿಲ್ಲಿ ಸೋಡಾ ಸವಿದು ಚಿಲ್ ಆಗಿ

Webdunia
ಶುಕ್ರವಾರ, 21 ಏಪ್ರಿಲ್ 2023 (14:26 IST)
ಈ ಬೇಸಿಗೆಯಲ್ಲಿ ತಾಪಮಾನ ದಿನೇ ದಿನೇ ಹೆಚ್ಚಾಗುವುದರೊಂದಿಗೆ ಪ್ರತಿಯೊಬ್ಬರೂ ಆಯಾಸ, ಬೆವರುವಿಕೆಯಿಂದ ಬಳಲುತ್ತಾರೆ. ಈ ವೇಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ.
 
ಈ ಸಮಯ ಕೇವಲ ನೀರು ಏಕೆ? ನಾಲಿಗೆಗೆ ವಿವಿಧ ರೀತಿಯ ರುಚಿಯನ್ನು ನೀಡುವ ಮೂಲಕವೂ ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಬಹುದು. ನಾವಿಂದು ಹೇಳಿಕೊಡುವ ರೆಸಿಪಿ ನಿಮ್ಮ ನಾಲಿಗೆಗೆ ಹೊಸ ರುಚಿಯನ್ನು ನೀಡುವುದಲ್ಲದೇ ರಿಫ್ರೆಶಿಂಗ್ ಅನುಭವ ನೀಡುತ್ತದೆ. ಹಾಗಿದ್ದರೆ ಈ ಕೂಡಲೇ ಮ್ಯಾಂಗೋ ಚಿಲ್ಲಿ ಸೋಡಾ ಮಾಡೋದು ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು

ಹಸಿರು ಮೆಣಸಿನಕಾಯಿ – 2
ಮಾವಿನ ಹಣ್ಣಿನ ರಸ – 1 ಕಪ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ಸೋಡಾ – 2 ಕಪ್
ಕಲ್ಲುಪ್ಪು – ಕಾಲು ಟೀಸ್ಪೂನ್ 

ಮಾಡುವ ವಿಧಾನ

* ಮೊದಲಿಗೆ ಹಸಿರು ಮೆಣಸಿನಕಾಯಿಗಳನ್ನು ಸೀಳಿ.
* ಒಂದು ಗ್ಲಾಸ್ಗೆ ಮಾವಿನ ಹಣ್ಣಿನ ರಸವನ್ನು ಹಾಕಿ, ಅದಕ್ಕೆ ಚಿಲ್ಲಿ ಫ್ಲೇಕ್ಸ್ ಹಾಗೂ ಕಲ್ಲುಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
* ಅದಕ್ಕೆ ಸೋಡಾವನ್ನು ಸುರಿದು ಮಿಶ್ರಣ ಮಾಡಿ.
* ಈಗ ಸೀಳಿದ ಮೆಣಸಿನಕಾಯಿಯನ್ನು ಗ್ಲಾಸ್ನ ರಿಮ್ನಲ್ಲಿ ಇರಿಸಿ.
* ಈಗ ಮ್ಯಾಂಗೋ ಚಿಲ್ಲಿ ಸೋಡಾವನ್ನು ಫ್ರಿಜ್ನಲ್ಲಿಟ್ಟು ತಣ್ಣಗಾಗಿಸಿ. ಇಲ್ಲವೇ ಐಸ್ಕ್ಯೂಬ್ ಸೇರಿಸಿ ತಕ್ಷಣಕ್ಕೂ ಸವಿಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಾಕಲೇಟ್ ತಿನ್ನುವುದರಿಂದ ಎಷ್ಟು ಉಪಯೋಗವಿದೆ ಗೊತ್ತಾ

ಮಣ್ಣಿನ ಪಾತ್ರೆಯಲ್ಲಿರುವ ನೀರು ಕುಡಿದರೆ ಏನೆಲ್ಲಾ ಲಾಭ ನೋಡಿ

ಡೆಂಗ್ಯೂ ಜ್ವರ ಬಂದಾಗ ಹಾಲು ಸೇವನೆ ಮಾಡಬಹುದೇ

ಹೆಚ್ಚುತ್ತಿರುವ ಡೆಂಗ್ಯೂ ತಡೆಯಲು ಈ ಸಲಹೆಗಳನ್ನು ಪಾಲಿಸಿ

ಮಳೆ ಸುರಿಯುತ್ತಿರುವಾಗ ಈ ತಿಂಡಿ ಕೊಟ್ರೇ ಹತ್ತು ಪ್ಲೇಟ್ ಬೇಕಾದ್ರು ತಿನ್ಬೋದು

ಮುಂದಿನ ಸುದ್ದಿ
Show comments