Select Your Language

Notifications

webdunia
webdunia
webdunia
webdunia

ಮಕ್ಕಳ ಹಸಿವು ಭವಿಷ್ಯದಲ್ಲಿ ಸಿಟ್ಟಿಗೆ ಕಾರಣವಾಗಬಲ್ಲದು ಜೋಕೆ

ಮಕ್ಕಳ ಹಸಿವು ಭವಿಷ್ಯದಲ್ಲಿ ಸಿಟ್ಟಿಗೆ ಕಾರಣವಾಗಬಲ್ಲದು ಜೋಕೆ
ದೆಹಲಿ , ಬುಧವಾರ, 22 ಜೂನ್ 2016 (11:54 IST)
ಮೆಡಿಕಲ್ ರಿಸರ್ಚ್ ಸಂಸ್ಥೆಯೊಂದು ನಡೆಸಿದ ಅಧ್ಯಯನ ಮಾಹಿತಿ ಹೊರಬಿದಿದ್ದೆ. ನಿಮ್ಮ ಮಕ್ಕಳು ಹಸಿವು ಅಂತ ಹೇಳಿದ್ರೆ ಮಕ್ಕಳಿಗೆ ಆಹಾರ ನೀಡಿ. ಯಾಕಂದ್ರೆ ನಿಮ್ಮ ಮಕ್ಕಳು ದಿನದಲ್ಲಿ ಎರಡು ಬಾರಿ ಹಸಿವೆಯಿಂದ ಬಳಲುತ್ತಿದ್ರೆ ಅವರಿಗೆ ಆಹಾರ ಕೊಡುವುದನ್ನು ಮರೆಯಬೇಡಿ. ಮಕ್ಕಳು ಹಸಿವು ಅವರ ಭವಿಷ್ಯದಲ್ಲಿ ಸಿಟ್ಟಾಗುವಂತೆ ಮಾಡಬಲ್ಲದ್ದು ಜೋಕೆ. 
ಶೇ 37 ರಷ್ಟು ಮಕ್ಕಳು ಅಧ್ಯಯನಕ್ಕೆ ಒಳಪಡಿಸಿದಾಗ ಆಗಾಗ್ಗೆ  ಹಸಿವಿಗೆ ಮಕ್ಕಳು ಒಳಗಾಗಿದ್ವು.. ಈ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಭವಿಷ್ಯದಲ್ಲಿ ನಿಮ್ಮ ಮಕ್ಕಳ ಮೇಲೆ ಸಿಟ್ಟನ್ನು ಉಂಟು ಮಾಡಬಲ್ಲದ್ದು ಎಂದು ಮಾಹಿತಿಯಿಂದ ಬೆಳಕಿಗೆ ಬಂದಿದೆ. 
 
ಬಾಲ್ಯದಲ್ಲಿ ಯಾವುದೇ ಹಸಿವಿನ ಅನುಭವವಾಗದ ಮಕ್ಕಳಲ್ಲಿ ಶೇ 15ರಷ್ಟು ಮಕ್ಕಳು ಹಿಂಸಾಚಾರದಲ್ಲಿ ತೊಡಗಿರುವುದು ತಿಳಿದು ಬಂದಿದೆ. ಅಲ್ಲದೇ ಈ ಹಿಂದೆ ಮಾಡಲಾದ ಸಂಶೋಧನೆಯಿಂದ ಮಕ್ಕಳು ಬಾಲ್ಯದಲ್ಲಿ ಹಸಿವು ಸಮಸ್ಯೆ ಎದುರಿಸಿದ್ದರೆ ಅಂಥ ಮಕ್ಕಳು ನಕಾರಾತ್ಮಕ ಸಮಸ್ಯೆಗಳಿಂದ ಬಳಲುತ್ತವೆ. ಹಸಿವಿಗೆ ಬಡತನ ಕೂಡ ಕಾರಣವಾಗಿದೆ ಎಂದು ಹೇಳಲಾಗಿದೆ. 
 
ಇತ್ತೀಚಿನ ಅಧ್ಯಯನ ಪ್ರಕಾರ ಬಾಲ್ಯದ ಹಸಿವು ಹಾಗೂ ಕಡಿಮೆ ಸ್ವಯಂ ನಿಯಂತ್ರಣ ಹಾಗೂ ಅಂರ್ತವ್ಯಕ್ತಿಯ ಹಿಂಸೆಯ ಮಧ್ಯೆ ತುಲನೆ ಮಾಡಲಾಗಿದೆಯಂತೆ,
 
ಉತ್ತಮ ಪೋಷಕಾಂಶಯುಳ್ಳ ಆಹಾರ ಅಷ್ಟೇ ಅಲಲ್ ಶೈಕ್ಷಣಿಕ ಯಶಸ್ಸಿಗೆ ಅಷ್ಟೇ ಕಾರಣವಲ್ಲ.. ಆದರೆ ಮುಖ್ಯವಾಗಿ ಮಕ್ಕಳು ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಿದೆ. ಅಲ್ಲದೇ ನಿಮ್ಮ ಮಕ್ಕಳು ಶಾಲೆಯಲ್ಲಿ ವಿಫಲವಾಗಲು ಪ್ರಾರಂಭಿಸಿದರೆ, ಮುಂದೆ ಇತರ ಕ್ಷೇತ್ರಗಳಲ್ಲೂ ವಿಫಲವಾಗಲು ಕಾರಣವಾಗುತ್ತದೆ ಎಂದು ಟೆಕ್ಸಸ್ ವಿಶ್ವವಿದ್ಯಾಲಯದ ಪ್ರೋಫೆಸರ್ ಅಲೆಕ್ಸ್ ತಿಳಿಸಿದ್ದಾರೆ. 
 
ಆದ್ದರಿಂದ ನಿಮ್ಮ ಮಕ್ಕಳು ಹಸಿದಿದ್ರೆ ಆಹಾರ ನೀಡಿ ಇಲ್ಲವಾದಲ್ಲಿ ಭವಿಷ್ಯದಲ್ಲಿ ಮಕ್ಕಳ ಉದ್ವೇಗಕ್ಕೆ ಕಾರಣವಾಗಬಲ್ಲದ್ದು ಈ ಹಸಿವು..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಿಜನ್ ಫೇಶಿಯಲ್‌ ಚಿಕಿತ್ಸೆ( ವಿಡಿಯೋ)