Select Your Language

Notifications

webdunia
webdunia
webdunia
webdunia

‘ಆ’ ಭಾಗದಲ್ಲಿ ತುರಿಕೆಗೆ ಕಾರಣಗಳು ಹಲವು

‘ಆ’ ಭಾಗದಲ್ಲಿ ತುರಿಕೆಗೆ ಕಾರಣಗಳು ಹಲವು
ಬೆಂಗಳೂರು , ಗುರುವಾರ, 12 ಅಕ್ಟೋಬರ್ 2017 (08:30 IST)
ಬೆಂಗಳೂರು: ಮಹಿಳೆಯರಿಗೆ ಕೆಲವು ಸಮಸ್ಯೆಗಳನ್ನು ಹೇಳಲೂ ಆಗದ ಅನುಭವಿಸಲೂ ಆಗದ ಪರಿಸ್ಥಿತಿ. ಅಂತಹದ್ದರಲ್ಲಿ ಗುಪ್ತಾಂಗದ ತುರಿಕೆಯೂ ಒಂದು.

 
ಇದಕ್ಕೆ ಕಾರಣಗಳು ಹಲವು. ತುರಿಕೆಯಿಂದಾಗಿ ಕೆಲವರಿಗೆ ಆ ಭಾಗ ಕೆಂಪಗಾಗುವುದು, ಕಜ್ಜಿಯಂತಾಗುವುದು, ನೋವು, ಊದಿಕೊಳ್ಳುವುದು ಮುಂತಾದ ಕಿರಿ ಕಿರಿ ಉಂಟಾಗುತ್ತದೆ. ಒದ್ದೆ ಒಳ ಉಡುಪು ಹಾಕಿಕೊಳ್ಳುವುದು, ಶುಚಿಯಿರದ ಒಳಉಡುಪು, ಋತುಮತಿಯಾದ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ನ್ನು ಆಗಾಗ ಬದಲಾಯಿಸಿಕೊಳ್ಳದೇ ಇರುವುದು ಕೆಲವು ಕಾರಣಗಳು.

ಅದರ ಹೊರತಾಗಿ ಸೋಂಕು ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಬಹುದು. ಮಧುಮೇಹ, ಹಾರ್ಮೋನಲ್ ಸಮಸ್ಯೆಗಳೂ ತುರಿಕೆಗೆ ಕಾರಣವಾಗಬಹುದು. ಅದಲ್ಲದೇ ಹೋದರೆ ಕೆಲವು ಸಾಬೂನಿನಲ್ಲಿರುವ ರಾಸಾಯನಿಕಗಳು, ಮುಟ್ಟು ನಿಲ್ಲುವ ಸಂದರ್ಭ, ಅಸುರಕ್ಷಿತ ಲೈಂಗಿಕ ಸಂಪರ್ಕವೂ ಗುಪ್ತಾಂಗದ ತುರಿಕೆಗೆ ಕಾರಣವಾಗಬಹುದು. ಹಾಗಾಗಿ ಗುಪ್ತಾಂಗದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೆಲಕಡಲೆ ಬೀಜ ತಿಂದ ಕೂಡಲೇ ನೀರು ಕುಡಿಯಬಾರದೇ ?