Daily Horoscope

Select Your Language

Notifications

webdunia
webdunia
webdunia
webdunia

ಸೀತಾಫಲ ಹಣ್ಣು ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಸೀತಾಫಲ
ಬೆಂಗಳೂರು: ಸೀತಾಫಲ ಹಣ್ಣು ಎಂದ ತಕ್ಷಣ ಅದರ ಬೀಜದ ಕಡೆ ಹೆಚ್ಚು ಗಮನ ಹರಿಸುತ್ತೇವೆ. ಹಣ್ಣು ಸ್ವಾದಿಷ್ಟವಾಗಿದ್ದರೂ, ಇದರ ಒಳಗಿರುವ ಬೀಜದಿಂದ ಈ ಹಣ್ಣನ್ನು ತಿನ್ನಲು ಹಿಂದೆಮುಂದೆ ನೋಡುತ್ತೇವೆ. ಎಲ್ಲಾ ಕಡೆ ಸಿಗುವ ಈ ಸೀತಾಫಲ ಹಣ್ಣು ತಿನ್ನಲು ತುಂಬ ರುಚಿಯಾಗಿರುತ್ತೆ ಮತ್ತು ಅಷ್ಟೇ ಔಷದಿಯ ಗುಣಗಳನ್ನು ಹೊಂದಿದೆ.

ಕುರುವಿಗೆ ರಾಮಬಾಣ: ಸೀತಾಫಲದ ಎಲೆಗಳನ್ನು ನುಣ್ಣಗೆ ರುಬ್ಬಿ ಕುರುಗಳಿಗೆ ಹಚ್ಚಿದರೆ ಬೇಗನೆ ಕಡಿಮೆಯಾಗುತ್ತದೆ.

ಜ್ವರ, ಕೆಮ್ಮು ನಿವಾರಣೆ: ಸೀತಾಫಲದ ಗಿಡದ ತೊಗಟೆ ಯನ್ನು ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.

ಹುಣ್ಣುಗಳ ವಾಸಿ: ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಪುಡಿಮಾಡಿಕೊಂಡು ತೆಂಗಿನೆಣ್ಣೆಯಲ್ಲಿ ಕಲಸಿ ಹುಣ್ಣಿಗೆ ಹಚ್ಚಿದರೆ ಹಣ್ಣು ಬೇಗ ವಾಸಿಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗಬೇಕೆ...? ಇಲ್ಲಿದೆ ನೋಡಿ ಟಿಪ್ಸ್!