ಬೆಂಗಳೂರು: ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಮನಸ್ಸಿನ ತುಂಬಾ ಕೆಲದೊತ್ತಡ. ಇಂತಹ ದಿನ ಸಂಗಾತಿಯೊಂದಿಗೆ ಕೂಡಿದರೆ ಒತ್ತಡವೆಲ್ಲಾ ಮಂಗ ಮಾಯ!
ಮರುದಿನವೂ ಉಲ್ಲಾಸದಿಂದ ಕೆಲಸ ಮಾಡಬಹುದು. ಹಾಗಂತ ಹೊಸ ಸಂಶೋಧನೆಯೊಂದ ಹೇಳಿದೆ. ವಾಷಿಂಗ್ಟನ್ ವಿವಿ ನಡೆಸಿದ ಸಂಶೋಧನೆಯೊಂದರಿಂದ ಒತ್ತಡದ ದಿನದಲ್ಲಿ ಸಂಗಾತಿಯೊಂದಿಗೆ ಸಮಾಗಮ ನಡೆಸುವ ಲಾಭವೇನೆಂದು ತಿಳಿದುಬಂದಿದೆ.
ಇದು ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಅನ್ವಯಿಸುತ್ತದೆ. ಲೈಂಗಿಕ ಜೀವನ ಮನುಷ್ಯನ ಒತ್ತಡ ದೂರ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಅದರಲ್ಲು ಕಚೇರಿಯಲ್ಲಿ ಕೆಲಸ ಮಾಡಲು ಇನ್ನಷ್ಟು ಉತ್ಸಾಹ ಬರುತ್ತದೆ ಎನ್ನುವುದು ಅವರ ವಾದ.
ಇದಕ್ಕಾಗಿ ಸಂಶೋಧಕರು 159 ವಿವಾಹಿತ ದಂಪತಿಗಳನ್ನು ಸಂಶೋಧನೆಗೊಳಪಡಿಸಿದ್ದಾರೆ. ಎರಡು ವಾರಗಳ ಕಾಲ ಅವರನ್ನು ಸಮೀಕ್ಷೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರಿಂದ ಸೆಕ್ಸ್ ಮಾಡುವುದರಿಂದ ಕೆಲಸದಲ್ಲಿ ಮುಂದೆ ಬರುವ ಸಾಧ್ಯತೆಯೂ ಹೆಚ್ಚು ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ