ಬೇಸಿಗೆಯಲ್ಲಿ ಚರ್ಮದ ಕಾಂತಿ ಉಳಿಸಲು ಏನು ಮಾಡಬೇಕು?

Webdunia
ಸೋಮವಾರ, 20 ಮಾರ್ಚ್ 2017 (10:54 IST)
ಬೆಂಗಳೂರು: ಬೇಸಿಗೆ ಬಂತು. ಹೊರಗಡೆ ಕಾಲಿಟ್ಟರೆ, ಸುಡುವ ಸೂರ್ಯ ಸುಂದರ ಚರ್ಮ ಹಾಳು ಮಾಡುತ್ತಾನೆ. ಚರ್ಮ ಕಪ್ಪಾಗುವಿಕೆ, ಬಿರುಕು ಸಮಸ್ಯೆಯನ್ನು ತಡೆಯಲು ಮನೆಯಲ್ಲೇ ಮಾಡಬಹುದಾದ ಮದ್ದು ಏನಿದೆ ನೋಡೋಣ.

 

ಇದಕ್ಕೆ ಬೇಕಾಗಿರುವುದು, ಮೊಸರು, ಮೊಟ್ಟೆ ಹಾಗೂ ಬಾಳೆ ಹಣ್ಣು. ಬಾಳೆ ಹಣ್ಣನ್ನು ಸಿಪ್ಪೆ ತೆಗೆದು ಕಿವುಚಿಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರು, ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಮುಖ ಕಾಂತಿಯುತವಾಗುವುದು.

 
ಇದೇ ರೀತಿ ಬಾದಾಮಿಯ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಮೊಟ್ಟೆ ಬಳಸಲು ಇಷ್ಟವಿಲ್ಲದಿದ್ದರೆ, ಬಾದಾಮಿಯನ್ನು ನೆನೆಸಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆದುಕೊಳ್ಳಿ. ಇದರಿಂದ ಚರ್ಮದ ಹೊಳಪು ಹಾಳಾಗುವುದಿಲ್ಲ.

 
ಇದೆಲ್ಲಾ ದುಬಾರಿ ಎನಿಸಿದರೆ, ಹಾಲು ಮತ್ತು ಕಡಲೇ ಹಿಟ್ಟನ್ನು ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು.  ಅಲ್ಲದೆ ಆದಷ್ಟು, ಕಿತ್ತಳೆ ಹಣ್ಣು,  ಸೌತೇಕಾಯಿ ಜ್ಯೂಸ್ ಕುಡಿಯುತ್ತಿದ್ದರೆ ಬೇಸಿಗೆಯಲ್ಲಿ ಆರೋಗ್ಯಕ್ಕೂ ಒಳ್ಳೆಯದು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments