Select Your Language

Notifications

webdunia
webdunia
webdunia
webdunia

ಸಬ್ಬಕ್ಕಿ ಅಥವಾ ಸಾಬುಧಾನೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ಸಬ್ಬಕ್ಕಿ ಅಥವಾ ಸಾಬುಧಾನೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು
ಬೆಂಗಳೂರು , ಶನಿವಾರ, 24 ಮಾರ್ಚ್ 2018 (06:42 IST)
ಬೆಂಗಳೂರು : ಸಬ್ಬಕ್ಕಿಯನ್ನು ಹೆಚ್ಚಾಗಿ ಪಾಯಸ ಮಾಡಲು ಬಳಸುತ್ತಾರೆ. ಇದು ಪಾಯಸದ ಸವಿಯನ್ನು ಹೆಚ್ಚಿಸುವುದರ ಜೊತೆಗೆ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ.


*ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕಲಿಸಿ, ಇದನ್ನು ಮುಖದ ಮೇಲೆ ಹಚ್ಚಿ ಇದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.

*ಸಬ್ಬಕ್ಕಿಯ ಪುಡಿಯನ್ನು ಮೊಸರಿನೊಂದಿಗೆ ಚೆನ್ನಾಗಿ ಕಲಿಸಿ ಮುಖಕ್ಕೆ ಹಚ್ಚಿದರೆ ಡಲ್ ಆದ ಚರ್ಮ ಹೊಳೆಯುತ್ತದೆ.

*ಸಬ್ಬಕ್ಕಿಯನ್ನು ಆಲಿವ್‌ ಆಯಿಲ್‌ನಲ್ಲಿ ಚೆನ್ನಾಗಿ ಕಲಿಸಿ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

* ಸಬ್ಬಕ್ಕಿ ಪುಡಿಯನ್ನು ಹಾಲು ಮತ್ತು ಅರಿಶಿನದ ಜೊತೆ ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಸುಕ್ಕುಗಟ್ಟುವಿಕೆ ದೂರವಾಗುತ್ತದೆ

*ಚರ್ಮದ ತುಂಬ ಪಿಂಪಲ್‌ ಆಗಿದ್ದರೆ ಸಬ್ಬಕ್ಕಿ ಪುಡಿಯ ಜೊತೆಗೆ ಅರಿಶಿನ ಮತ್ತು ರೋಸ್‌ ವಾಟರ್‌ ಕಲಿಸಿ ಹಚ್ಚಿದರೆ ಪಿಂಪಲ್ ವಾಸಿಯಾಗುತ್ತವೆ.

*ಸಬ್ಬಕ್ಕಿ ಪುಡಿಯನ್ನು ಅದಕ್ಕೆ ಕಡ್ಲೆಬೇಳೆ ಹಿಟ್ಟು ಮತ್ತು ಮೊಸರು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಚರ್ಮಕ್ಕೆ ಹೊಸ ಹೊಳಪು ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಧುಮೇಹಿಗಳು ಸಕ್ಕರೆ ಬದಲಾಗಿ ಬೆಲ್ಲ ಸೇವಿಸಬಹುದೇ?