Webdunia - Bharat's app for daily news and videos

Install App

ಬಾಳೆ ದಿಂಡು ಉಪಯೋಗ ನೂರಾರು

Webdunia
ಬುಧವಾರ, 21 ಡಿಸೆಂಬರ್ 2016 (11:51 IST)
ಬೆಂಗಳೂರು: ಬಾಳೆ ದಿಂಡು ಬೇರೆ ಮರದ ಕಾಂಡಗಳಷ್ಟು ಗಟ್ಟಿಯಾಗಿರಲಿಕ್ಕಿಲ್ಲ. ಆದರೆ ಅದನ್ನು ತಿನ್ನುವುದರಿಂದ ನಾವು ಗಟ್ಟಿಯಾಗುತ್ತೇವೆ. ಬಾಳೆಯ ಎಲೆ, ಹಣ್ಣು, ಕಾಂಡ ಪ್ರತಿಯೊಂದೂ ಸಾಕಷ್ಟು ಆರೋಗ್ಯಕರ ಅಂಶ ಹೊಂದಿದೆ. ಅದರ ಕಾಂಡದಿಂದ ತಯಾರಿಸುವ ಪಲ್ಯ ಅಥವಾ ಜ್ಯೂಸ್ ನಿಂದ ಸಿಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ.

ಬಾಳೆ ದಿಂಡಿನ ರಸ
ಬಾಳೆ ದಿಂಡಿನಲ್ಲಿ ನೀರಿನ ಅಂಶ ಜಾಸ್ತಿಯಿರುತ್ತದೆ. ಇದರ ಜ್ಯೂಸ್ ಸೇವಿಸುವುದು ಮೂತ್ರಜನಕಾಂಗದ ಆರೋಗ್ಯಕ್ಕೆ ಒಳ್ಳೆಯದು. ಮೂತ್ರದಲ್ಲಿ ಕಲ್ಲು ಇರುವವರು, ಉರಿ ಮೂತ್ರ ಇರುವವರು ಬಾಳೆ ದಿಂಡಿನ ಜ್ಯೂಸ್ ಸೇವಿಸುವುದು ಉತ್ತಮ.

ನಾರಿನಂಶ ಹೆಚ್ಚು

ಬಾಳೆ ದಿಂಡಿನಲ್ಲಿ ನಾರಿನಂಶ ಹೆಚ್ಚು. ಇದು ಜೀರ್ಣಕ್ರಿಯೆಗೆ ಸಹಕಾರಿ. ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕುತ್ತದೆ. ಹೀಗಾಗಿ ಇದರ ಪಲ್ಯ, ಸಲಾಡ್ ಮಾಡಿ ತಿನ್ನುವುದು ಆರೋಗ್ಯಕ್ಕೆ ಉತ್ತಮ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು

ಬಾಳೆ ದಿಂಡಿನ ರಸ ಸೇವನೆ ಮಕ್ಕಳಿಗೂ ಉತ್ತಮ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಅದರ ರಸವನ್ನು ಹಾಗೇ ಸೇವಿಸಲು ಸಾಧ್ಯವಿಲ್ಲದಿದ್ದರೆ, ಸ್ವಲ್ಪ ಉಪ್ಪು, ಖಾರದ ಪುಡಿ ಸೇರಿಸಿ ಸೇವಿಸಬಹುದು.

ತೂಕ ಇಳಿಸಲು ನೆರವಾಗುತ್ತದೆ

ಇಂದಿನ ಹೆಚ್ಚಿನವರಿಗೆ ಬೊಜ್ಜಿನ ಸಮಸ್ಯೆ ಸಾಮಾನ್ಯ. ತೂಕ ಇಳಿಸುವ ಚಿಂತೆ ಇರುವವರಿಗೆ ಬಾಳೆ ದಿಂಡು ಉತ್ತಮ ಮನೆ ಔಷಧ. ಬಾಳೆ ದಿಂಡಿನಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ಜೀರ್ಣವಾಗಲು ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಬಳಕೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶ ಕರಗಿ, ದೇಹ ತೆಳ್ಳಗಾಗಲು ನೆರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments