Select Your Language

Notifications

webdunia
webdunia
webdunia
webdunia

ಊಟದ ನಡುವೆ ನೀರು ಕುಡಿಯಬಾರದೇಕೆ? ಕಾರಣಗಳು ಇಲ್ಲಿವೆ ನೋಡಿ

ಊಟದ ನಡುವೆ ನೀರು ಕುಡಿಯಬಾರದೇಕೆ? ಕಾರಣಗಳು ಇಲ್ಲಿವೆ ನೋಡಿ
Bangalore , ಮಂಗಳವಾರ, 10 ಜನವರಿ 2017 (14:10 IST)
ಬೆಂಗಳೂರು:  ನಾವು ಸಾಕಷ್ಟು ನೀರು ಕುಡಿದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯ ಎನ್ನುವುದೇನೋ ನಿಜ. ಆದರೆ ಊಟದ ನಡುವೆ ಆಗಾಗ ಹೊಟ್ಟೆ ತುಂಬಾ ನೀರು ಕುಡಿಯುವುದು ಒಳ್ಳೆಯದಲ್ಲ. ಕಾರಣಗಳೇನು ತಿಳಿದುಕೊಳ್ಳೋಣ.


ನೀರು ಕುಡಿಯದೇ ಇದ್ದರೆ ಗಂಟಲು ಕಟ್ಟಿದಂತಾಗುತ್ತದೆ. ಊಟದ ತಟ್ಟೆ ಬಲಗಡೆ ನೀರಿನ ಲೋಟ ಇರಲೇಬೇಕೆನ್ನುವವರು ಇದನ್ನು ಒಮ್ಮೆ ಗಮನಿಸಿ. ಬಾಯಾರಿಕೆಯಾಗುತ್ತದೆಂದು ಊಟದ ಸಮಯದಲ್ಲಿ ನೀರು ಕುಡಿಯಬೇಡಿ. ಊಟದ ಮೊದಲು ಅಥವಾ ನಂತರ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಉತ್ತಮ.

ಹಾಗಂತ ಒಂದೆರಡು ಗುಟುಕು ನೀರು ಕುಡಿಯಬಾರದೆಂದೇನಿಲ್ಲ. ಊಟದಷ್ಟೇ ನೀರೂ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಊಟ ಮಾಡುವಾಗ ನಮ್ಮ ಆಹಾರ ಜೀರ್ಣವಾಗಲು ಜೀರ್ಣ ರಸ ಬಿಡುಗಡೆಯಾಗುತ್ತಿರುತ್ತವೆ. ಒಂದು ವೇಳೆ ನೀರು ಕುಡಿದರೆ ಈ ರಸ ತನ್ನ ಕೆಲಸ ಮಾಡಲು ಅಡ್ಡಿಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

ಹಾಗಾಗಿ ಆಹಾರಕ್ಕೆ ಹೆಚ್ಚು ಖಾರ, ಉಪ್ಪು ಬಳಸದಿದ್ದರೆ ನೀರು ಕುಡಿಯುವ ಪ್ರಮೇಯ ಒದಗುವುದಿಲ್ಲ. ತುಂಬಾ ಬಾಯಾರಿಕೆಯಾಗುತ್ತಿದ್ದರೆ, ಚೆನ್ನಾಗಿ ನೀರು ಕುಡಿದು ಅರ್ಧ ಗಂಟೆ ಬಿಟ್ಟು ಊಟ ಮಾಡಿ. ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೂ ಕಾಡುವ ಅಸಿಡಿಟಿ ಹೊಟ್ಟೆನೋವು, ಏನೇನು ಮಾಡಬೇಕು?