Select Your Language

Notifications

webdunia
webdunia
webdunia
webdunia

ಬಿಸಿಲ ಧಗೆಗೆ ಪ್ರಿಡ್ಜ್ ನೀರು ಕುಡಿಯುತ್ತಿದ್ದೀರಾ, ಹಾಗಾದರೆ ಈ ಲೇಖನ ಓದಿ

Summer Health Tips
ರಾಜ್ಯದಲ್ಲಿ ದಿನದಿಂದ ದಿನ ಬಿಸಿಲ ಧಗೆ ಏರುತ್ತಲೇ ಇದೆ. ಇನ್ನೂ ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ತುಂಬಾನೇ ಮುಖ್ಯ. ಇದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದ. 

ಇನ್ನೂ ಈ ಬಿಸಿಲ ತಾಪಕ್ಕೆ ಫ್ರಿಜ್‌ನಿಂದ ತೆಗೆದ ತಣ್ಣನೆಯ ನೀರು ಕುಡಿಯುವುದು ಸ್ವರ್ಗದಂತೆ ಅನ್ನಿಸಬಹುದು. ಆದರೆ, ಆ ಕ್ಷಣದ ಆರಾಮದ ಜೊತೆಗೆ ಇದು ನಮ್ಮ ದೇಹದ ಮೇಲೆ ಕೆಲವು ಪರಿಣಾಮಗಳನ್ನು ಬೀರುತ್ತದೆ.

ಇನ್ನೂ ಈ ಲೇಖನದಲ್ಲಿ ಪ್ರಿಡ್ಜ್‌ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ: 

ಗಮನಿಸಬೇಕಾದ ಅಂಶಗಳು (ಅಡ್ಡಪರಿಣಾಮಗಳು)

ಅತಿಯಾಗಿ ಅಥವಾ ಅತೀ ಹೆಚ್ಚು ತಣ್ಣಗಿರುವ ನೀರನ್ನು ಕುಡಿಯುವುದರಿಂದ ಕೆಲವು ಸಮಸ್ಯೆಗಳು ಎದುರಾಗಬಹುದು:

    ಜೀರ್ಣಕ್ರಿಯೆಗೆ ಅಡ್ಡಿ: ನಾವು ಅತಿಯಾದ ತಣ್ಣೀರು ಕುಡಿದಾಗ ನಮ್ಮ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಆಹಾರ ಜೀರ್ಣವಾಗಲು ಬೇಕಾದ ಶಕ್ತಿಯು ದೇಹದ ಉಷ್ಣತೆಯನ್ನು ಸರಿದೂಗಿಸಲು ಬಳಕೆಯಾಗಿ, ಜೀರ್ಣಕ್ರಿಯೆ ನಿಧಾನವಾಗಬಹುದು.

    ಗಂಟಲು ನೋವು: ಬಿಸಿಲಿನಿಂದ ಬಂದ ತಕ್ಷಣ ಐಸ್ ನೀರು ಕುಡಿಯುವುದರಿಂದ ಗಂಟಲಿನಲ್ಲಿ ಲೋಳೆಯ ಪದರ (mucus) ದಪ್ಪವಾಗಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಕೆಮ್ಮು ಅಥವಾ ಗಂಟಲು ನೋವಿಗೆ ಕಾರಣವಾಗಬಹುದು.

    ಹೃದಯದ ಬಡಿತದ ಮೇಲೆ ಪ್ರಭಾವ: ಕೆಲವು ಸಂಶೋಧನೆಗಳ ಪ್ರಕಾರ, ತಣ್ಣೀರು ಕುಡಿಯುವುದು 'ವೇಗಸ್ ನರ'ವನ್ನು (Vagus ಪ್ರಚೋದಿಸಿ ಹೃದಯದ ಬಡಿತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

    ಹಲ್ಲುಗಳ ಸೂಕ್ಷ್ಮತೆ: ಹಲ್ಲುಗಳಲ್ಲಿ ಸೆಳೆತ ಅಥವಾ ಹಲ್ಲಿನ ಸಮಸ್ಯೆ ಇರುವವರಿಗೆ ತಣ್ಣೀರು ತೊಂದರೆ ನೀಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲ ಧಗೆಗೆ ಹೆಚ್ಚು ಕಾಡುವ ಬೆವರು ಗುಳ್ಳೆಗೆ ಇಲ್ಲಿದೆ ಮನೆ ಮದ್ದು