Publish Date: Mon, 13 Jan 2020 (06:19 IST)
Updated Date: Mon, 13 Jan 2020 (06:21 IST)
ಬೆಂಗಳೂರು : ಕುತ್ತಿಗೆಗೆ ಸರಗಳನ್ನು ಹಾಕುವುದರಿಂದ ಅದರಿಂದ ಅಲರ್ಜಿಯಾಗಿ ಅಥವಾ ಇನ್ನಾವುದೋ ಕಾರಣಗಳಿಂದ ಕುತ್ತಿಗೆ ಸುತ್ತಲೂ ಕಪ್ಪಾದ ಕಲೆಗಳು ಮೂಡುತ್ತವೆ. ಇದು ಕುತ್ತಿಗೆಯ ಅಂದವನ್ನು ಕೆಡಿಸುತ್ತದೆ. ಅದನ್ನು ಹೋಗಲಾಡಿಸಲು ಹೀಗೆ ಮಾಡಿ.
ಸ್ವಲ್ಪ ಅಕ್ಕಿ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ಟೊಮೆಟೊ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುತ್ತಿಗೆ ಸುತ್ತಲು ಹಚ್ಚಿಕೊಳ್ಳಿ. 15 ನಿಮಿಷಗಳು ಹಾಗೆ ಬಿಟ್ಟು ಬಳಿಕ ಚೆನ್ನಾಗಿ ಸ್ಕ್ರಬ್ ಮಾಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಿ. ಹೀಗೆ ಮಾಡುತ್ತಾ ಬಂದರೆ ನಿಮ್ಮ ಕುತ್ತಿಗೆ ಸುತ್ತ ಮೂಡಿರುವ ಕಪ್ಪಾದ ಕಲೆಗಳು ಮಾಯವಾಗುತ್ತದೆ.