Publish Date: Mon, 13 Apr 2020 (07:08 IST)
Updated Date: Mon, 13 Apr 2020 (07:09 IST)
ಬೆಂಗಳೂರು : ಬೇಸಿಗೆಗಾಲದಲ್ಲಿ ಮುಖದಲ್ಲಿ ಕಪ್ಪು ಕಲೆಗಳು ಮೂಡುತ್ತವೆ. ಹಾಗೇ ಮುಖದ ಮೇಲೆ ಹಳೆಯದಾದ ಕಲೆಗಳು ಇರುತ್ತವೆ. ಈ ಕಲೆಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಹಚ್ಚಿ.
¼ ಭಾಗ ನಿಂಬೆಹಣ್ಣು, ಒಂದೊಂದು ಪೀಸ್ ಸೌತೆಕಾಯಿ, ಆಲೂಗಡ್ಡೆ, ಬಾಳೆಹಣ್ಣು ಇವಿಷ್ಟನ್ನು ಮಿಕ್ಸಿಗೆ ಹಾಕಿ ರುಬ್ಬಿ. ಅದನ್ನು ಸೋಸಿ ರಸ ತೆಗೆಯಿರಿ. ಈ ರಸಕ್ಕೆ 1ಚಮಚ ಕಡಲೆಹಿಟ್ಟು, 1ಚಮಚ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಮುಖವನ್ನು ಕ್ಲೀನ್ ಆಗಿ ತೊಳೆದು ಮುಖಕ್ಕೆ ಹಚ್ಚಿ. ಒಣಗಿದ ನಂತರ ತಣ್ಣೀರಿನಲ್ಲಿ ವಾಶ್ ಮಾಡಿ. ಹೀಗೆ ಮಾಡಿದರೆ ಬೇಸಿಗೆಯಲ್ಲಿ ಮುಖದ ಮೇಲೆ ಮೂಡಿದ ಕಪ್ಪು ಕಲೆ ಹಾಗೂ ಹಳೆದಾದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.