Daily Horoscope

Select Your Language

Notifications

webdunia
webdunia
webdunia
webdunia

ಮಾಸ್ಕ್ ಧರಿಸಲ್ಲವೆಂದ ಮಗನನ್ನೆ ಕೊಲೆ ಮಾಡಿದ ತಂದೆ

ಕೊಲ್ಕತ್ತಾ

ಕೊಲ್ಕತ್ತಾ :ಕೊರೊನಾ ಭೀತಿ ಹಿನ್ನಲೆಯಲ್ಲಿ ಮಾಸ್ಕ್ ಧರಿಸಿಲ್ಲವೆಂದು ತಂದೆಯೊಬ್ಬ ತನ್ನ ವಿಕಲಚೇತನ ಮಗನನ್ನು ಕೊಲೆ ಮಾಡಿದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

 

ಸಿರ್ಷೆಂದು ಮಲ್ಲಿಕ್(45) ಮೃತಪಟ್ಟ ಮಗ, ಬನ್ಯಿಧರ್ ಮಲ್ಲಿಕ್ (78) ಕೊಲೆ ಮಾಡಿದ ತಂದೆ. ಕೊಲ್ಕತ್ತಾದಲ್ಲಿ ಕೊರೊನಾ ಭೀತಿ ಹೆಚ್ಚಿದ್ದರೂ ಮಾಸ್ಕ್ ಧರಿಸದೆ ಮಗ ಹೊರಗೆ ಹೊರಟಿದ್ದ. ಇದರಿಂದ ಕೋಪಗೊಂಡ ತಂದೆ ಮಾಸ್ಕ್ ಧರಿಸುವಂತೆ ತಿಳಿಸಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿ ಅದು ವಿಕೋಪಕ್ಕೆ ತಿರುಗಿ ತಂದೆ ಬಟ್ಟೆಯಿಂದ ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
 

ಬಳಿಕ ಪೊಲೀಸರಿಗೆ ತಾನೇ ಹೋಗಿ ಶರಣಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಕೊರೊನಾದಿಂದ 80 ವರ್ಷದ ವೃದ್ಧ ಸಾವು