Webdunia - Bharat's app for daily news and videos

Install App

ಮಳೆಗಾಲದಲ್ಲಿ ಕಾಯಿಲೆ ತಡೆಯಿರಿ.. ಇಲ್ಲಿದೆ ಟೀಪ್ಸ್

Webdunia
ಶುಕ್ರವಾರ, 29 ಜುಲೈ 2016 (10:07 IST)
ಮಳೆಗಾಲಲ್ಲಿ ಆರೋಗ್ಯ ಸಮಸ್ಯೆಗಳು ಅತಿ ಹೆಚ್ಚು ಕಾಡುತ್ತವೆ. ಈ ವೇಳೆ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಸೂಕ್ತ ಅಗತ್ಯ ಎಚ್ಚರಿಕೆ ತೆಗೆದುಕೊಂಡ್ರೆ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು. ಮುಂಗಾರುವಿನಲ್ಲಿ ಬರುವ ಕಾಯಿಲೆಗಳಿಂದ ದೂರವಿರಲು ಇಲ್ಲಿದೆ ಟಿಪ್ಸ್.. 

ಮಲೇರಿಯಾ..:
ಮಳೆಗಾಲದಲ್ಲಿ ಎಲ್ಲಾ ಕಾಯಿಲೆಗಳ ಪಟ್ಟಿಯಲ್ಲಿ ಮಲೇರಿಯಾ ಮೊದಲನೇ ಸ್ಥಾನ... ಸೊಳ್ಳೆ ಮಲೇರಿಯಾಕ್ಕೆ ಮುಖ್ಯ ಕಾರಣ.. ಈ ಸೊಳ್ಳೆ ಸಾದಾರಣವಾಗಿ ನೀರಿನ ತೊಟ್ಟಿಗಳಲ್ಲಿ, ನೀರು ನಿಂತಿರುವ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ಆಗಿದ್ದಾಗೆ ಸ್ವಚ್ಛ ಮಾಡುತ್ತಿರಬೇಕು. 

ಅತಿಸಾರ ಬೇದಿ: 

ಇದು ಮಳೆಗಾಲದಲ್ಲಿ ಬರುವ ಮತ್ತೊಂದು ಕಾಯಿಲೆ.. ಇದು ಅನಾರೋಗ್ಯಕರ ಕೊಳಕು ಆಹಾರ ಇಲ್ಲವೇ ಅಶುದ್ಧಿ ಆಹಾರ ಹಾಗೂ ನೀರು ಸೇವನೆಯಿಂದ ಬರುತ್ತದೆ. ಅತಿಸಾರದಲ್ಲಿ ಎರಡು ವಿಧಗಳಿವೆ.. ತೀಕ್ಷ್ಣ ಹಾಗೂ ದೀರ್ಘಕಾಲಿಕ ಅತಿಸಾರ ಬೇದಿ.. ಈ ಕಾಯಿಲೆ ತಡೆಗಟ್ಟಲು ಆಹಾರ ತಿನ್ನುವ ಮುನ್ನ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಬೇಕು. 

ಡೆಂಗ್ಯೂ:
ಮಾನ್ಸೂನ್‌ನಲ್ಲಿ ಸೊಳ್ಳೆಯ ಕಡಿತದಿಂದ ಬರುವ ಕಾಯಿಲೆ.. ಮಳೆಗಾಲದಲ್ಲಿ ಈ ಕಾಯಿಲೆ ಬರದಂತೆ ತಡೆಯಲು ಕೀಟನಿವಾರಕ ಬಳಸಿ.. ಹಾಗೂ ನಿಮ್ಮ ಮೈತುಂಬಾ ಬಟ್ಟೆಗಳನ್ನು ಹಾಕಿಕೊಳ್ಳಿರಿ. 

ಚಿಕನ್ ಗುನ್ಯಾ: 
ಸೋಕಿಂತ ಸೊಳ್ಳೆ ಕಡಿತದಿಂದ ಹರಡುತ್ತದೆ. ಆದ್ದರಿಂದ ಆರೋಗ್ಯದ ಕಡೆಗೆ ಗಮನ ಹರಿಸಲೇಕು. ನಿಯಮಿತವಾಗಿ ಮನೆಗಳಲ್ಲಿ ಊಟ ಮಾಡುವಾಗ, ಅಡುಗೆ ಮಾಡುವಾಗ ಪಾತ್ರೆಗಳನ್ನು ತೊಳೆದು ಉಪಯೋಗಿಸಿ. ಕ್ರಿಮಿ ನಿವಾರಕ ಕ್ರೀಮ್ ಉಪಯೋಗಿಸಿ. 

ಟೈಪಾಯಿಡ್ ಕಾಯಿಲೆ: 
ಮಳೆಗಾಲದಲ್ಲಿ ಎಲ್ಲರಿಗೂ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಯಿಲೆ ಇದು. ಸಲ್ಮೊನೆಲ್ಲಾ ಟೈಪಿ ಬ್ಯಾಕ್ಟೇರಿಯಾ ಸೇರಿರುವ ನೀರು ಅಥವಾ ಆಹಾರವನ್ನು ಸೇವಿಸುವ ಮೂಲಕ ಟೈಪಾಡ್ ಕಾಯಿಲೆ ಬರುತ್ತದೆ. ರೋಗ ಬರದಂತೆ ತಡೆಯಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ರಸ್ತೆ ಬದಿಯಲ್ಲಿ ಮಾರಾಟವಾಗುವ ಆಹಾರವನ್ನು ಹಾಗೂ ದ್ರವವನ್ನು ನಿಷೇದಿ.ಿ

ವೈರಲ್ ಜ್ವರ:
ವೈರಲ್ ಜ್ವರವು ಎಲ್ಲಾ ಕಾಲದಲ್ಲಿ ಬಂದರೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೈರಲ್ ಜ್ವರದ ಸಾಮಾನ್ಯ ಲಕ್ಷಣಗಳು 3 ರಿಂದ 7 ದಿನಗಳವರೆಗೆ ಶೀತ ಮತ್ತು ಕೆಮ್ಮಿನ ಜತೆ ಶುರುವಾಗಿ ಗಂಭೀರ ಜ್ವರ ಬರುವುದು.

ಕಾಲರಾ:
ಮಾನ್ಸೂನ್‌ನಲ್ಲಿ ಮಾರಣಾಂತಿಕ ಕಾಯಿಲೆ ಅಂತಲೇ ಹೇಳಬಹುದು. ಕಲುಷಿತ ನೀರು, ಆಹಾರ ಸೇವನೆ ಕಾಲರ ಬರುತ್ತದೆ. ಇದು ಕಳಪೆ ಮತ್ತು ಅನಾರೋಗ್ಯಕರ ವಾತಾವರಣದಿಂದಲೂ ಬರುತ್ತದೆ. ತೀವ್ರ ಅತಿಸಾರ ಬೇದಿ ಇವುಗಳ ಸಾಮಾನ್ಯ ಲಕ್ಷಣ, ಕಾಲರಾವನ್ನು ತಪ್ಪಿಸಲು ಸುಚಿಯಾಗಿರುವ ನೀರು ಕುಡಿಯಿರಿ. ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. 

ಲೆಪ್ಟೊಸ್ಪಿರೊಸಿಸ್ ಕಾಯಿಲೆ
ಇದು ಕೊಳಕು ನೀರು ಸಂಪರ್ಕದಿಂದ ಬರುವ ಕಾಯಿಲೆ.. ಮುಂಗಾರುವಿನಲ್ಲಿ ಈ ರೋಗವನ್ನು ತಡೆಯಲು ನೀವೂ ಹೊರಗಡೆ ಹೋದಾಗ ನಿಮ್ಮ ಪಾದಗಳನ್ನು ಪೂರ್ತಿಯಾಗಿ ಮುಚ್ಚಿಕೊಳ್ಳಿ. ನಿಮ್ಮ ದೇಹದ ಮೇಲೆ ಗಾಯಗಳಾಗಿದ್ರೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.

ಇನ್ನೂ ಈ ವೇಳೆ ತ್ವಚೆಯ ಸಮಸ್ಯೆಗಳು ಕಾಡಬಹುದು... ಮಳೆಗಾಲದಲ್ಲಿ ಸ್ಕಿನ್ ಸಮಸ್ಯೆಗಳಿದ್ರೆ ಚರ್ಮ ರೋಗ ತಜ್ಞರನ್ನು ಕಾಣುವುದು ಉತ್ತಮ. ಅಲ್ಲದೇ ಮಳೆಗಾಲದಲ್ಲಿ ತಲೆ ಹೊಟ್ಟು ಕಾಣಿಸಿಕೊಳ್ಳುತ್ತದೆ. ತಲೆ ಹೊಟ್ಟಿನ ಸಮಸ್ಯೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದು. ಸೂಕ್ತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

 
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments